BANK OF BARODA ದ ತುಂಬೆ ಬ್ರಾಂಚಿನಲ್ಲಿ ಸ್ಥಾಪನಾ ದಿನ ಆಚರಣೆ
Thursday, July 21, 2022
ಬ್ಯಾಂಕ್ ಆಫ್ ಬರೋಡದ 115ನೇ ಸ್ಥಾಪನಾ ದಿನವನ್ನು ಬ್ಯಾಂಕಿನ ತುಂಬೆ ಶಾಖೆಯಲ್ಲಿ ಜುಲೈ 20ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ವರ್ಗಾವಣೆಗೊಂಡ ಪ್ರಬಂಧಕರಾದ ಅನೂಪ್ ಸದಾಶಿವ, ನೂತನ ಪ್ರಬಂಧಕರಾದ ಸ್ನೇಹರಾಜ್,
ಗ್ರಾಹಕರಾದ ಲೋಕನಾಥ ಶೆಟ್ಟಿ, ಗಣೇಶ್ ಸಾಲಿಯಾನ್, ಹಬೀಬ್ ಮತ್ತು ದಿನೇಶ್ ತುಂಬೆ ಇವರು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಉಪಸ್ಥಿತರಿದ್ದರು.