UDUPI : ಹಸು ಅಡ್ಡ ಬಂದಾಗ ನಿಯಂತ್ರಣ ತಪ್ಪಿದೆ ; ಆಂಬ್ಯುಲೆನ್ಸ್ ಚಾಲಕ ರೋಶನ್ ಪ್ರತಿಕ್ರಿಯೆ
Thursday, July 21, 2022
ಉಡುಪಿ ಜಿಲ್ಲೆಯ ಬೈಂದೂರಿನ ಶಿರೂರು ಟೋಲ್ ಗೇಟ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ದುರ್ಘಟನೆಗೆ ಆಂಬ್ಯುಲೆನ್ಸ್ ಚಾಲಕನ ಅತೀ ವೇಗವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಂಬ್ಯುಲೆನ್ಸ್ ಚಾಲಕ ರೋಶನ್, ಟೋಲ್ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಅಂತ ಆರೋಪಿದ್ದಾನೆ.
ಹೊನ್ನವರ ಶ್ರೀ ದೇವಿ ಆಸ್ಪತ್ರೆಯಿಂದ ಉಡುಪಿ ಆದರ್ಶ ಆಸ್ಪತ್ರೆಗೆ ರೋಗಿಯನ್ನು ಶಿಫ್ಟ್ ಮಾಡುತ್ತಿದ್ದೆ. ಟೋಲ್ ಗೇಟ್ ನಲ್ಲಿ ಮೊದಲ ಬ್ಯಾರಿಕೇಟ್ ತೆಗೆದಿದ್ದಾರೆ ಎರಡನೇ ಬ್ಯಾರಿಕೇಟ್ ತೆಗೆಯುತ್ತಿದ್ದಾಗ ಹಸು ಅಡ್ಡ ಬಂದಿದೆ ಈ ವೇಳೆ ನಿಯಂತ್ರಣ ತಪ್ಪಿ ಏನು ಮಾಡುದಕ್ಕೆ ಆಗಲಿಲ್ಲ, ಮುಂದೆ ಹೋಗಿದ್ರೆ ಹಸು ಹಾಗೂ ಮೂವರು ಸಿಬ್ಬಂದಿಗೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿಯಾಗುವ ಸಾಧ್ಯತೆ ಇತ್ತು.ಹೀಗಾಗಿ ಹಿಂದುಗಡೆ ಬ್ರೇಕ್ ಹೊಡೆದು ಆಂಬ್ಯುಲೆನ್ಸ್ ಢಿಕ್ಕಿ ಹೊಡೆದಿದೆ ಸ್ಥಳದಲ್ಲೇ ಮೂವರು ಸಾವನ್ಪಿದ್ದಾರೆ ಚಾಲಕ ರೋಶನ್ ಹೇಳಿದ್ದಾನೆ.