UDUPI : ಉಡುಪಿಯ ಕಡಲ ತೀರದಲ್ಲಿ ಕಡಲ ಕೊರೆತ
Saturday, July 2, 2022
ಉಡುಪಿಯಲ್ಲಿ ವರುಣನ ಅಬ್ಬರ ಕಡಿಮೆಯಾಗಿದ್ರೂ, ಕಡಲ ಅಬ್ಬರ ಜೋರಾಗಿದೆ. ಸಮುದ್ರದ ಅಲೆಗಳ ಹೊಡೆತಕ್ಕೆ ಕಡಲ ಕೊರೆತ ಉಂಟಾಗಿದ್ದು, ಉಡುಪಿಯ ಕಾಪುವಿನ ಮುಳೂರು ಭಾಗದಲ್ಲಿ ಕಡಲ ಕೊರೆತದಿಂದ ಭೂ ಪ್ರದೇಶ ಕೊಚ್ಚಿ ಹೋಗಿದೆ.
ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ತಡೆಯಲು, ಕಲ್ಲುಗಳ ದಂಡೆ ನಿರ್ಮಿಸಲಾಗಿದ್ದು, ಕಡಲ ಅಲೆಗಳ ರಭಸಕ್ಕೆ ಕಲ್ಲುಗಳು ಸಮುದ್ರ ಪಾಲಾಗುತ್ತಿದೆ. ಭೂ ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ತೆಂಗಿನ ಮರಗಳು ದರೆಗೆ ಉರುಳಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಕಡಲ ತೀರದಲ್ಲಿ ಕಡಲ ಕೊರೆತ ಹೆಚ್ಚಾಗುತ್ತಿದೆ. ಇದಕ್ಕಾಗಿ ಕಲ್ಲುಗಳ ದಂಡೆ ನಿರ್ಮಾಣ ಮಾಡಲಾಗುತ್ತಿದರೂ, ಅಲೆಗಳ ಹೊಡೆತಕ್ಕೆ ಇವುಗಳು ನಿಲ್ಲುತ್ತಿಲ್ಲ, ಕಡಲ ಸೇರುತ್ತಿದೆ. ಹೀಗಾಗಿ ಕಡಲ ಕೊರತೆಕ್ಕೆ ಶಾಶ್ವತ ಪರಿಹಾರ ನೀಡಬೇಕು ಅಂತ ಒತ್ತಾಯ ಕೇಳಿ ಬಂದಿದೆ.