UDUPI: ಕೆಸರು ಗದ್ದೆಯಾಗಿದೆ ಉಡುಪಿ ನಗರಸಭಾ ಅಧ್ಯಕ್ಷರ ವಾರ್ಡಿನ ರಸ್ತೆ
Saturday, July 2, 2022
ಉಡುಪಿ ನಗರಸಭಾ ಅಧ್ಯಕ್ಷರ ವಾರ್ಡಿನಲ್ಲಿ ಮಳೆಗಾಲದಲ್ಲಿ ಆರಂಭಿಸಿದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಜನತೆ ಸಂಕಷ್ಟ ಪಡುವಂತಾಗಿದೆ. ಉಡುಪಿ ನಗರಸಭೆಗೆ ಒಳಪಟ್ಟ ಸ್ವತಹ ನಗರಸಭಾ ಅಧ್ಯಕ್ಷರಾಗಿರುವ ಸುಮಿತ್ರಾ ನಾಯಕ್ ಇವರು ಪ್ರತಿನಿಧಿಸುವ ಪರ್ಕಳದಲ್ಲಿ ಅಗಲೀಕರಣ ಕಾಮಗಾರಿಯು ಕಳೆದ ಒಂದುವರೆ ತಿಂಗಳಿನಿಂದ ನಿಧಾನಗತಿಯಲ್ಲಿ ಸಾಗುತಿದ್ದು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತಿದ್ದಾರೆ. ನಗರೋತ್ಥಾನ ಯೋಜನೆಯಡಿಯಲ್ಲಿ ಸುಮಾರು ಒಂದು ಕೋಟಿ ಅನುದಾನದಲ್ಲಿ ಈ ರಸ್ತೆಯನ್ನು ಅಗಲೀಕರಣಗೊಳಿಸಲು ನಿರ್ಧರಿಸಲಾಗಿತ್ತು. ಮಳೆಗಾಲ ಪ್ರಾರಂಭವಾಗುವ ಮುನ್ನ ಕಾಮಗಾರಿ ಆರಂಭಿಸಿ ಮುಗಿಸಬೇಕಿದ್ದ ಇಲಾಖೆ ಮತ್ತು ಗುತ್ತಿಗೆದಾರರು, ಮಳೆಗಾಲ ಆರಂಭವಾಗುವ ಕೆಲವೇ ದಿನಗಳ ಮುನ್ನ ಕಾಮಗಾರಿ ಆರಂಭಿಸಿದ್ದಾರೆ. ಇದೀಗ ಉಡುಪಿಯಲ್ಲಿ ಮಳೆ ಪ್ರಮಾಣ ಕೂಡಾ ತೀವ್ರವಾಗುತಿದ್ದು. ಇದರ ನಡುವೆ ಅಪೂರ್ಣ ಕಾಮಗಾರಿಯಿಂದಾಗಿ ರಸ್ತೆ ಕೆಸರು ಗದ್ದೆಯಂತಾಗಿದೆ.