Pakisthan: 18 ವರ್ಷದ ಯುವತಿ 61 ವರ್ಷದ ಮುದುಕನನ್ನು ಮದುವೆಯಾಗಿದ್ದೇಕೆ?
Sunday, July 3, 2022
ಇಸ್ಲಾಮಾಬಾದ್: 61 ವರ್ಷದ ವ್ಯಕ್ತಿಯನ್ನು 18 ವರ್ಷದ ಯುವತಿಯೋರ್ವಳು ತಾನೇ ಇಷ್ಟಪಟ್ಟು ಮದುವೆಯಾಗಿರುವ ಸುದ್ದಿ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.
18 ವರ್ಷದ ಆಸಿಯಾ 61 ವರ್ಷದ ಸಂಶಾದ್‌ನನ್ನು ಮದುವೆಯಾಗಿದ್ದಾಳೆ. ಇದರಲ್ಲಿ ಯಾವುದೇ ಬಲವಂತವಿಲ್ಲ. ನಾನೇ ಸಂಶಾದ್‌ನ ಸಮಾಜಸೇವೆಗೆ ಮನಸೋತು ಮದುವೆಯಾಗಿದ್ದೇನೆ ಎಂದು ಆಸಿಯಾ ಹೇಳಿಕೊಂಡಿದ್ದಾಳೆ.
18 ವರ್ಷದ ಆಸಿಯಾ ತನಗಿಂತ 43 ವರ್ಷ ಹಿರಿಯ ಸಂಶಾದ್ ಜೊತೆ ಇಷ್ಟವಾಗಲು ಕಾರಣ ಶಂಶಾದ್ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು. ಶಂಶಾದ್ ರಾವಲ್ಪಿಂಡಿಯಾದ್ಯಂತ ಬಡ ಹುಡುಗಿಯರನ್ನು ಮದುವೆ ಮಾಡಿಸುತ್ತಿದ್ದರು. ಅಲ್ಲದೆ ಅನೇಕ ಬಡವರಿಗೆ ನೆರವಾಗುತ್ತಿದ್ದರು. ಹೀಗೆ ಆಸಿಯಾ ಅವರ ಊರಿನಲ್ಲೂ ಒಂದಷ್ಟು ಹೆಣ್ಣು ಮಕ್ಕಳ ವಿವಾಹ ಮಾಡಿಸಿದ್ದಾರೆ. ಶಂಶಾದ್ ಅವರ ಈ ಸಮಾಜ ಸೇವೆಗೆ ಮನಸೋತ ಆಸಿಯಾಗೆ ಅವರ ಮೇಲೆ ಪ್ರೇಮಾಂಕುರವಾಗಿದೆ.
ಆರಂಭದಲ್ಲಿ ಆಸಿಯಾ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಆದರೂ ಹಠ ಮಾಡಿ ಶಂಶಾದ್ ಅವರನ್ನೇ ಪತಿಯಾಗಿ ಪಡೆಯುವಲ್ಲಿ ಆಸಿಯಾ ಯಶಸ್ವಿಯಾಗಿದ್ದಾರೆ.