
UDUPI : ಕೃಷಿ ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದ ಯುವಕ ಸಾವು
Thursday, July 14, 2022
ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದಾಗ ಕುಸಿದು ಬಿದ್ದ ಯುವಕ ಮೃತಪಟ್ಟ ಘಟನೆ ಉಡುಪಿಯ ಬೇಳಂಜೆ ಗ್ರಾಮದ ಕೆಪ್ಪೆಕೆರೆಯ ಈಶ್ವರ ನಗರದಲ್ಲಿ ನಡೆದಿದೆ. ಕೃಷ್ಣ ನಾಯ್ಕ (26) ಮೃತ ಯುವಕ. ಕೃಷ್ಣ ನಾಯ್ಕ, ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದು, ಇವರನ್ನು ಮನೆಯವರು ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡಿದ್ದರು.
ಬಳಿಕ ವಿಪರೀತ ಎದೆನೋವು ಜಾಸ್ತಿಯಾದ ಕಾರಣ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.