UDUPI : ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ : 4 ಚಿನ್ನದ ಪದಕ ಪಡೆದ 63 ವರ್ಷದ ಆಶೋಕ್
Thursday, July 14, 2022
ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನ 60 ವರ್ಷ ಮೇಲ್ಪಟ್ಟ ಹಿರಿಯರ ವಿಭಾಗದಲ್ಲಿ ಕೋಟದ 63 ವರ್ಷದ ಅಶೋಕ್ ಜಿವಿ 4 ಚಿನ್ನದ ಪದಕ ಗಳಿಸಿದ್ದಾರೆ ಹೈದರಾಬಾದ್ ನ ವಿಜಯ ಭಾಸ್ಕರ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಎಂ 3 ಹಿರಿಯರ 74 ಕೆಜಿ ವಿಭಾಗದಲ್ಲಿ ಅಶೋಕ್ ಜಿವಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಇದೇ ಕೂಟದಲ್ಲಿ ಇವರ ಸಮಗ್ರ ಸಾಧನೆಗೆ ಎಂ 3 ವಿಭಾಗದ ಬೆಸ್ಟ್ ಲಿಫ್ಟರ್ ಗೌರವವನ್ನು ಪಡೆದಿದ್ದಾರೆ. ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವ ಅಶೋಕ ಜಿವಿ ಈಗಾಗಲೆ ಹಲವಾರು ರಾಷ್ಟೀಯ ಅಂತರಾಷ್ಟ್ರೀಯ ಮಟ್ಟದ ಹಿರಿಯ ಪವರ್ ಲಿಫ್ಟಿಂಗ್ ನಲ್ಲೂ ಸಾಧನೆ ಮೆರೆದಿರುವ ಸಸ್ಯಹಾರಿ ಲಿಫ್ಟರ್ ಆಗಿದ್ದಾರೆ. ತಮ್ಮ ಗರಡಿಯಲ್ಲಿ ಹಲವಾರು ಶಿಷ್ಯರಿಗೂ ತರಬೇತಿ ನೀಡಿರುವ ಅಶೋಕ್ ಜಿವಿ, ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ನಟಿ ನೀತಾ ಅಶೋಕ್ ಅವರ ತಂದೆ ಹಾಗೂ ಕಡಲ ತಡಿಯ ಭಾರ್ಗವ ಡಾ.ಕೋಟ ಶಿವರಾಮ ಕಾರಂತರ ಹತ್ತಿರದ ಸಂಬಂಧಿ.