ಈ ದೇವಾಲಯದ ಪ್ರವೇಶ ದ್ವಾರದಲ್ಲೇ ಇದೆ ಟನ್‌ಗಟ್ಟಲೆ ಚಿನ್ನ - ಈ ನವೀಕೃತ ದೇಗುಲ ಎಲ್ಲಿದೆ ಗೊತ್ತಾ?
Sunday, July 17, 2022
ತೆಲಂಗಾಣ: ಹೈದರಾಬಾದ್‌ನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿ ಆಂಧ್ರದ ತಿರುಪತಿಗೆ ಸರಿಸಮನಾಗಿ ಯದಾದ್ರಿ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ ನಿರ್ಮಾಣವಾಗಿದ್ದು, ಈ ಐತಿಹಾಸಿಕ ದೇವಾಲಯವು ಸ್ವರ್ಗವೇ ಧರಗಿಳಿದು ಬಂದಂತಿದೆ.
ಇದೊಂದು ಐತಿಹಾಸಿಕ ದೇವಾಲಯವಾಗಿದ್ದು, ಇದರ ಪುನರ್ನಿರ್ಮಾಣವು 2016 ರಲ್ಲಿ ಪ್ರಾರಂಭಗೊಂಡಿದ್ದು, ಇದೀಗ ಮುಕ್ತಾಯಗೊಂಡಿದೆ.
ಸುಮಾರು 14.5 ಎಕರೆಗಳಷ್ಟು ವಿಸ್ತಾರ ಪ್ರದೇಶದಲ್ಲಿ ಈ ದೇವಾಲಯವಿದ್ದು, ದೇವಾಲಯದ ಪುನರ್ ನಿರ್ಮಾಣ ಕಾರ್ಯದಲ್ಲಿ ಸಿಮೆಂಟ್ ಬದಲಿಗೆ 2,50,000 ಟನ್ ಗ್ರಾನೈಟ್ ಬಳಸಲಾಗಿದೆ.
ಪ್ರವೇಶದ್ವಾರಗಳನ್ನು ಹಿತ್ತಾಳೆಯಿಂದ ಮಾಡಲಾಗಿದ್ದು, ಅದರ ಮೇಲೆ ಚಿನ್ನದ ಲೇಪವನ್ನು ಹಾಕಲಾಗಿದೆ. ದೇವಸ್ಥಾನದ ಗೋಪುರದ ನಿರ್ದಿಷ್ಟ ದ್ವಾರದಲ್ಲಿ ಬರೋಬ್ಬರಿ 125 ಕೆಜಿ ಚಿನ್ನವನ್ನು ಬಳಸಲಾಗಿದೆ. ದೇವಾಲಯವು ಕಲ್ಲಿನಿಂದ ಮಾಡಲ್ಪಟ್ಟ ಏಳು 'ಗೋಪುರಗಳನ್ನು' ಹೊಂದಿದೆ.