
ಅಪ್ರಾಪ್ತೆಯ ಜೊತೆ ಮದುವೆಗಾಗಿ Aadhar cardನ್ನೇ ತಿದ್ದಿದ
Sunday, July 17, 2022
ಬೆಂಗಳೂರು: ಅಪ್ರಾಪ್ತೆಯನ್ನು ಮದುವೆಯಾಗಲು ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕದ ಮಾಹಿತಿಯನ್ನು ತಿದ್ದಿದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮನು ಬಂಧಿತ ಆರೋಪಿಯಾಗಿದ್ದು, ಈತ ಅಪ್ರಾಪ್ತೆ ಬಾಲಕಿಯ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕವನ್ನು ತಿದ್ದಿ ಮದುವೆಯಾಗಿದ್ದ.
ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ನಡೆದಿದ್ದು, ನೈಜ ದಾಖಲೆಯ ಪ್ರಕಾರ ಮದುವೆ ವೇಳೆ ಹುಡುಗಿಗೆ ಕೇವಲ 17 ವರ್ಷವಷ್ಟೇ ಆಗಿತ್ತು.
ಸದ್ಯ ಯುವಕನ ವಿಚಾರಣೆ ನಡೆಯುತ್ತಿದ್ದು, ಪೊಲೀಸರು ಆಧಾರ್ ಕಾರ್ಡ್ ತಿದ್ದಲು ಸಹಾಯ ಮಾಡಿದವರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.