
LuLu Mallನಲ್ಲಿ ಹನುಮಾನ್ ಚಾಲೀಸಾ ಪಠಣ - ಇಬ್ಬರ ಬಂಧನ
ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಉದ್ಘಾಟನೆಗೊಳಿಸಿದ ಇಲ್ಲಿನ ಲುಲು ಮಾಲ್‌ನಲ್ಲಿ ಧಾರ್ಮಿಕ ಸಂಘರ್ಷ ಮುಂದುವರಿದಿದ್ದು, ಇದೀಗ ಮಾಲ್‌ನೊಳಗೆ ಹನುಮಾನ್ ಚಾಲೀಸಾ ಪಠಣ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲದೇ ಮಾಲ್ ಬಳಿ ಪ್ರತಿಭಟನೆ ನೆಪದಲ್ಲಿ ಅಶಾಂತಿ ಸೃಷ್ಡಿಸಿದ್ದ ಸುಮಾರು 15 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜುಲೈ 12 ರಂದು ಲುಲು ಮಾಲ್‌ನ ಕ್ಯಾಂಪಸ್‌ನಲ್ಲಿ ಕೆಲವರು ನಮಾಜ್ ನೀಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಇದನ್ನು ಹಿಂದೂ ಮಹಾಸಭಾ ವಿರೋಧಿಸಿತ್ತು. ಅಲ್ಲದೇ ಮಾಲ್‌ನೊಳಗೆ ಹನುಮಾನ್ ಚಾಲೀಸಾ ಪಠಣಕ್ಕೆ ನಮಗೂ ಅವಕಾಶ ಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿತ್ತು.