ನೆಲ್ಲಿಕಾಯಿ ರಸ್ತೆ one way ಸಂಚಾರಕ್ಕೆ ಜನಾಕ್ರೋಶ - ರಸ್ತೆಯಲ್ಲೇ ಧರಣಿ ಕೂತ ಸ್ಥಳೀಯರು
Saturday, July 16, 2022
ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಯ ಅಂಗವಾಗಿ ನಗರದ ಸ್ಟೇಟ್‌ಬ್ಯಾಂಕ್ ನಿಂದ ಬಂದರಿಗೆ ಹೋಗುವ ನೆಲ್ಲಿಕಾಯಿ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಮಾಡಿದ್ದು, ಇದರಿಂದ ಆಕ್ರೋಶಿತ ನಾಗರಿಕರು ಇಂದು ರಸ್ತೆಯಲ್ಲೇ ಧರಣಿ ನಡೆಸಿದ್ದಾರೆ.
ನೆಲ್ಲಿಕಾಯಿ ರಸ್ತೆಯಲ್ಲಿ ಕೇವಲ ಬಂದರಿಗೆ ಹೋಗಲು ಮಾತ್ರ ಅವಕಾಶವಿದ್ದು, ಈ ರಸ್ತೆಯಾಗಿ ಬಂದರಿನಿಂದ ಸ್ಟೇಟ್‌ಬ್ಯಾಂಕ್‌ಗೆ ಬರುವುದನ್ನು ತಡೆಯಲಾಗಿದೆ.
ಇದರಿಂದಾಗಿ ಜನ ಕೆಎಸ್ ರಾವ್ ವೃತ್ತ, ಕ್ಲಾಕ್ ಟವರ್, ಆರ್‌ಟಿಒ ಆಗಿ ಸ್ಟೇಟ್‌ಬ್ಯಾಂಕಿಗೆ ತಲುಪಬೇಕಿದ್ದು, ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದ್ದು.
ಸ್ಥಳೀಯ ಕಾರ್ಪೋರೇಟರ್ ಅಬ್ದುಲ್ ಲತೀಫ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೋರೇಟರ್ ನವೀನ್ ಡಿಸೋಜ ಮತ್ತಿತರರು ಸಾಥ್ ನೀಡಿದ್ದರು.