-->
ads hereindex.jpg
UDUPI : ಚಾಲಕನ ನಿಯಂತ್ರಣ ತಪ್ಪಿದ ಬಸ್ ಡಿವೈಡರ್ ಮೇಲೆರಿತು..!

UDUPI : ಚಾಲಕನ ನಿಯಂತ್ರಣ ತಪ್ಪಿದ ಬಸ್ ಡಿವೈಡರ್ ಮೇಲೆರಿತು..!

ಚಾಲಕನ ನಿಯಂತ್ರಣ ತಪ್ಪಿದ ಬಸೊಂದು  ಡಿವೈಡರ್ ಮೇಲೆರಿ ನಿಂತ ಘಟನೆ ಉಡುಪಿ ಕುಂದಾಪುರದ ಕುಂಭಾಸಿ ರಾಷ್ಟ್ರೀಯ ಹೆದ್ದಾರಿಯ ಕೊರವಡಿ ಕ್ರಾಸ್‌ನಲ್ಲಿ ನಡೆದಿದೆ. 
ಮಂಗಳೂರಿನಿಂದ ಮುಂಬೈ ಕಡೆಗೆ ಸಾಗುತಿದ್ದ ಖಾಸಗಿ  ಬಸ್ ರಾಷ್ಟ್ರೀಯ ಹೆದ್ದಾರಿ ಯ ಆಳವಾದ ಹೊಂಡಕ್ಕೆ ಇಳಿದು ಡಿವೈಡರ್ ಎರಿ ನಿಂತಿದೆ. ಉಡುಪಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಹೊಂಡಮಯವಾಗಿದ್ದು ಇದೇ ರೀತಿಯ ಹೊಂಡಕ್ಕೆ ಬಸ್ ಬಿದ್ದಿದೆ. ತಕ್ಷಣವೇ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಬಸ್ ಅನ್ನು ಡಿವೈಡರ್ ಮೇಲೇ ಏರಿಸಿ ಹೆಚ್ಚಿನ ಅಪಾಯವನ್ನು ತಪ್ಪಿಸಿದ್ದಾರೆ. ಬಸ್ ನಲ್ಲಿ ಸುಮಾರು 40ರಷ್ಟು ಪ್ರಯಾಣಿಕರಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ‌. 
Ads on article

Advertise in articles 1

advertising articles 2