
ಬರೋಬ್ಬರಿ ಏಳು ಮಹಿಳೆಯರನ್ನು ಭೋಗಸ್ ಮದುವೆಯಾದ ಭೂಪ - ಈ ಪೈಕಿ ಮೂವರು ಒಂದೇ ಓಣಿಯವರು
ವಿಚ್ಛೇದಿತ ಶ್ರೀಮಂತ ಮಹಿಳೆಯರೇ ಈತನ ಟಾರ್ಗೆಟ್
ಆಂದ್ರ ಪ್ರದೇಶ: ವ್ಯಕ್ತಿಯೊಬ್ಬ ಬೋಗಸ್ ವಿಚ್ಛೇದನ ಪ್ರಮಾಣಪತ್ರದ ಮುಂದಿಟ್ಟು ಬರೋಬ್ಬರಿ ಏಳು ಮಹಿಳೆಯರನ್ನು ಮದುವೆಯಾಗಿರುವ ಘಟನೆ ಬೆಳಕಿಗೆ ಆಂದ್ರಪ್ರದೇಶದ ಮಲ್ಲಿ ಬಂದಿದೆ.
ಶ್ರೀಮಂತ, ವಿಚ್ಚೇಧಿತ ಮಹಿಳೆಯರನ್ನು ಗುರಿಯಾಗಿಸಿ ಅಡಪ ಶಿವಶಂಕರ ಬಾಬು ಎಂಬಾತ ಏಳು ಮಹಿಳೆಯರನ್ನು ಮದುವೆಯಾಗಿದ್ದು, ಅವರ ಬಳಿಯಿಂದ ಲಕ್ಷಾಂತರ ರುಪಾಯಿ ಹಣ ಪಡೆದು ವಂಚಿಸಿದ್ದಾನೆ.
ಅಲ್ಲದೇ ಒಂದೇ ಓಣಿಯಿಂದಲೂ ಮೂವರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಈತ ಮದುವೆಯಾದ ಏಳು ಮಹಿಳೆಯರ ಪೈಕಿ ಇಬ್ಬರು ಈತನ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಬಳಿಕ ಈತನ ಬಣ್ಣ ಬಯಲಾಗಿದೆ.