ಕೇರಳದಿಂದ ದುಬೈಗೆ ಹೊರಟಿದ್ದ Air India ವಿಮಾನ ಮಸ್ಕತ್‌ನಲ್ಲಿ ತುರ್ತು ಲ್ಯಾಂಡಿಂಗ್ - ಯಾಕೆ ಗೊತ್ತಾ?
Monday, July 18, 2022
ನವದೆಹಲಿ: ಕೇರಳದ ಕೋಯಿಕ್ಕೋಡ್‌ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮಸ್ಕತ್‌ನಲ್ಲಿ ತುರ್ತು ಲ್ಯಾಂಡಿಗ್ ಆಗಿದೆ. ವಿಮಾನದ ಕ್ಯಾಬಿನ್ ಮುಂಭಾಗದ ಗ್ಯಾಲೀ ದ್ವಾರದಿಂದ ಸುಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಈ ರೀತಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ಕೋಯಿಕೋಡ್‌ನಿಂದ ಹಾರಿದ ವಿಮಾನ ಬಹುದೂರ ಸಾಗಿದ ಬಳಿಕ ಕ್ಯಾಬಿನ್ ಮುಂಭಾಗದ ಗ್ಯಾಲಿಯ ದ್ವಾರದಿಂದ ಸುಟ್ಟ ವಾಸನೆ ಬಡಿಯಲಾರಂಭಿಸಿತು. ಇದರಿಂದ ಆತಂಕಗೊಂಡ ಪೈಲಟ್ ಕೂಡಲೇ ವಿಮಾನವನ್ನು ಮಸ್ಕತ್‌ನೆಡೆಗೆ ತಿರುಗಿಸಿ ಲ್ಯಾಂಡಿಂಗ್ ಮಾಡಲಾಗಿದೆ.
ಲ್ಯಾಂಡ್ ಆದ ವಿಮಾನವನ್ನು ತಂತ್ರಜ್ಞರು ಪರಿಶೀಲಿಸಿದ್ದು, ವಿಮಾನದ ಇಂಜಿನಲ್ಲೋ, ಎಪಿಯುನಲ್ಲೋ ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ಏವಿಯೇಶನ್ ಅಧಿಕಾರಿಗಳು ತಿಳಿಸಿದ್ದಾರೆ.