
ಕಾಂಗ್ರೆಸ್ ಶಾಸಕನಿಗೆ ಕೇಸರೀ ಶಾಲು ಹಾಕಿದ BJP ಶಾಸಕರು
ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌದದಲ್ಲಿ ಮತದಾನ ಮಾಡಿ ಬರುತ್ತಿದ್ದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರಿಗೆ ಬಿಜೆಪಿ ಶಾಸಕರಾದ ರಾಜುಗೌಡ ಮತ್ತು ಎಂ.ಪಿ.ರೇಣುಕಾಚಾರ್ಯ ಒತ್ತಾಯಪೂರ್ವಕವಾಗಿ ಕೇಸರಿ ಶಾಲು ಹಾಕಿದ ಘಟನೆ ನಡೆದಿದೆ.
ಆದರೆ ಶಾಲು ಹಾಕಿದ ಬಳಿಕ ಮಾಧ್ಯಮಗಳ ಕ್ಯಾಮರಾ ಗಮನಿಸಿದ ಬೈರತಿ ಸುರೇಶ್ ಶಾಲು ತೆಗೆಯಲು ಪ್ರಯತ್ನಪಟ್ಟರು.
ಆದರೆ ಮಾಧ್ಯಮದ ಎದುರು ಶಾಸಕ ಭೈರತಿ ಸುರೇಶ್ ಗೆ ಇರಿಸುಮುರಿಸಾಗಿದ್ದು, ಬಿಜೆಪಿ ಶಾಸಕರು ಮಾತ್ರ ಹಾಸ್ಯ ಮಾಡಿ ಅಣಕವಾಡುತ್ತಿದ್ದರು.