UDUPI : ದೇಗುಲದಲ್ಲಿ ತಿರುಗುವ ಮುಚ್ಚಿಗೆ ನೋಡಿ ಸಿಎಂ ಅಚ್ಚರಿ
Thursday, June 2, 2022
ಇತಿಹಾಸ ಪ್ರಸಿದ್ಧ ಉಡುಪಿಯ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಅದ್ಭುತ ವಾಸ್ತುಶಿಲ್ಪವೊಂದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಮರದಿಂದ ತಿರುಗುವ ಮುಚ್ಚಿಗೆ ಇರುವ ರಾಜ್ಯದ ಮೊದಲ ದೇವಸ್ಥಾನ ಇದಾಗಿದೆ. ಇತರೆ ದೇವಸ್ಥಾನದಲ್ಲಿ ಇದು ಕಾಣಸಿಗುದಿಲ್ಲ. ಹೀಗಾಗಿ ಸದ್ಯ ಭಕ್ತರ ಆಕರ್ಷಣೆಯ ಕೇಂದ್ರಬಿಂದು. ದೇವಸ್ಥಾನದದ ಪ್ರವೇಶದ್ವಾರದಲ್ಲಿರುವ ಈ ತಿರುಗುವ ಮರದ ಮುಚ್ಚಿಗೆಯನ್ನು ಮೆಚ್ಚುಗೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮೆಚ್ಚುಗೆ ಸೂಚಿಸಿದ್ದಾರೆ. ಶಿಲ್ಪಿ ಸುದರ್ಶನ ಆಚಾರ್ಯ ಅವರು ಇದನ್ನು ನಿರ್ಮಿಸಿದ್ದು, ಪ್ರದಕ್ಷಿಣೆ ಹಾಗೂ ಅಪ್ರದಕ್ಷಿಣೆಯಲ್ಲಿ ಎರಡು ಎಕ್ರಾಕಾರಗಳು ತಿರುಗುತ್ತದೆ. ನಡುವೆ ಕಮಲವಿದ್ದು ಅದು ಅರಳಿಂದತೆ ಭಾಸವಾಗುತ್ತದೆ. ಎರಡು ಚಕ್ರಾಕಾರದಲ್ಲಿ ೧೬ ಸಿಂಹ ಹಾಗೂ ೧೬ ಗಿಳಿ ರಚಿಸಲಾಗಿದೆ. ವಿದ್ಯುತ್ ಶಕ್ತಿ ಸಹಾಯದಿಂದ ಇದು ತಿರುಗುವಂತೆ ಮಾಡಲಾಗಿದ್ದು, ದಿನದಲ್ಲಿ ಇಂತಿಷ್ಟೇ ಗಂಟೆ ತಿರುಗುವಂತೆ ಟೈಮರ್ ಅಳವಡಿಸಲಾಗಿದೆ. ಸದ್ಯ ದೇಗುಲಕ್ಕೆ ಬರುವ ಭಕ್ತರು ಇದರ ವಿಡಿಯೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದಾರೆ. ತಿರುಗುವ ಮುಚ್ಚಿಗೆ ವೀಕ್ಷಿಸಲು ಅಂತ ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ..