
UDUPI ; ಪಡಿತರ ಅಕ್ಕಿಯನ್ನು ಖರೀದಿಸಿ ಮಾರಾಟ ಮಾಡುತ್ತಿದ್ದವನ್ನು ವಶಕ್ಕೆ ಪಡೆದ ಪೊಲೀಸರು
ಉಡುಪಿ
ಸರ್ಕಾರ ಬಡವರಿಗೆ ಅಂತ ಉಚಿತವಾಗಿ ನೀಡುವ ಪಡಿತರ ಅಕ್ಕಿಯನ್ನು ಮನೆಮನೆಗೆ ತೆರಳಿ ಹಣ ನೀಡಿ ಸಂಗ್ರಹಿಸಿ ಬಳಿಕ ಅಧಿಕ ಹಣಕ್ಕೆ ಮಾರಲು ಯತ್ನಿಸುತ್ತಿದ್ದ, ಖದೀಮ ಪೋಲಿಸರ ಸೆರೆಯಾಗಿದ್ದಾನೆ. ಉಡುಪಿಯ ಜಿಲ್ಲೆಯ ಕಾರ್ಕಳದ ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ದಂದೆ ನಡೆದಿದ್ದು, ಮೊಹಮ್ಮದ್ ಅಬ್ದುಲ್ ರಹಿಮನ್‌ನನ್ನು ಪೊಲೀಸರು ಬಂಧಿಸಿದ್ದಾರೆ, ಆತನಿಂದ 20 ಕ್ವಿಂಟಾಲ್ ಅಕ್ಕಿ ಮತ್ತು ಸಾಗಾಟಕ್ಕೆ ಬಳಸಿದ ವಾಹನ ವಶಕ್ಕೆ ಪಡೆದಿದ್ದಾರೆ. ನೀರೆ ಗ್ರಾ.ಪಂ.ನ ಕಣಜಾರು ಶೆಮೆಗುರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ವಾಹನದಲ್ಲಿ ಸಾಗಿಸುತ್ತಿರುವುದು ಪಂಚಾಯತ್ ಸದಸ್ಯ ಸಚ್ಚಿದಾನಂದ ಪ್ರಭು ಅವರ ಗಮನಕ್ಕೆ ಬಂದಿದ್ದು, ಪಿಡಿಒ ಅಂಕಿತಾ ಅವರಿಗೆ ತಿಳಿಸಿದರು. ಪಿಡಿಒ ತಹಶೀಲ್ದಾರ್‌ಗೆ ಮತ್ತು ಹಿರಿಯಡಕ ಠಾಣೆಗೆ ಮಾಹಿತಿ ರವಾನಿಸಿದರು. ಹಿರಿಯಡಕ ಪೋಲಿಸರು ಸ್ಥಳಕ್ಕೆ ಧಾವಿಸಿ ಮೊಹಮ್ಮದ್ ಅಬ್ದುಲ್ ರಹಿಮನ್‌ನನ್ನು ವಿಚಾರಿಸಿದಾಗ, ಬಿಪಿಎಲ್ ಕುಟುಂಬದವರಿಗೆ ತಿಂಗಳಿಗೆ 50 ಕೆಜಿ ಅಕ್ಕಿ ಸಿಗುತ್ತಿದ್ದು, ಕೆಲವರು ಅದನ್ನು ಈ ವ್ಯಕ್ತಿಗೆ ನೀಡಿ ಕೆಜಿಗೆ 10 ರೂ.ಗಳಂತೆ ಹಣ ಪಡೆಯುತ್ತಿದ್ದರು. ಆತ ಈ ಅಕ್ಕಿಯನ್ನು ಮಿಲ್‌ನಲ್ಲಿ ಪಾಲಿಷ್ ಮಾಡಿಸಿ ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ ಅಧಿಕ ಬೆಲೆಗೆ ಮಾರುತ್ತಿದ್ದ, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..