-->
UDUPI : ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ಸಿಎಂ ಚಾಲನೆ

UDUPI : ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ಸಿಎಂ ಚಾಲನೆ

ಪಶ್ಚಿಮ ಘಟ್ಟದ ಕಾಲ ಬುಡದಲ್ಲಿ ಉಡುಪಿಯ ಕಾರ್ಕಳ ತಾಲೂಕು ಇದ್ರೂ, ಬೇಸಿಗೆಯಲ್ಲಿ ಕಾಲದಲ್ಲಿ  ನೀರಿನ‌ ಕೊರತೆ ದೊಡ್ಡ ಮಟ್ಟದಲ್ಲಿ ಎದುರಾಗುತ್ತದೆ. ಹೀಗಾಗಿ ಕಾರ್ಕಳದ ಜನರ ನೀರಿನ ಬವಣೆ ನೀಗಿಸಬೇಕು ಅಂತ ಎಣ್ಣೆಹೊಳೆ ಏತ ನೀರಾವರಿ ಯೋಜನೆ ತರಲಾಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಬಾಗಿನ ಅರ್ಪಿಸಿ ಉದ್ಘಾಟಿಸಿದರು. ಕಾರ್ಕಳ ತಾಲೂಕಿನ ಮರ್ಣೆ ಎಂಬಲ್ಲಿ 108 ಕೋಟಿ ರೂ ವೆಚ್ಚದಲ್ಲಿ ಎಣ್ಣೆಯೊಳೆ ಏತ ನೀರಾವರಿ ಯೋಜನೆ ರೂಪುಗೊಂಡಿದ್ದು, 2020 ರಲ್ಲಿ ಕಾಮಗಾರಿ ಆರಂಭ ಆಗಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ. ಒಟ್ಟು 1500 ಹೆಕ್ಟೇರ್ ಭೂಮಿಗೆ ಇದು ಪ್ರಯೋಜನ ಆಗಲಿದೆ. ಒಟ್ಟು 504 ಜನವಸತಿ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸಲಿದೆ. ಎಣ್ಣೆಹೊಳೆ ಏತ ನೀರಾವರಿ ಯೋಜನೆಯಿಂದ ಅಂತರ್ಜಲ ಮಟ್ಟ ಕೂಡ ಏರಿಕೆಯಾಗಲಿದೆ. 4 ನದಿಯಲ್ಲಿ ತುಂಬಾ ದೂರದವರೆಗೂ ನೀರು ಸಂಗ್ರಹವಾಗಲಿದ್ದು, 15 ಅಡಿ ನೀರು ತುಂಬಿರಲಿದೆ..

Ads on article

Advertise in articles 1

advertising articles 2

Advertise under the article