UDUPI ; ಯುಪಿಸಿಎಲ್ ಗೆ 52 ಕೋಟಿ ರೂಪಾಯಿ ದಂಡ
Thursday, June 2, 2022
ಉಡುಪಿಯ ಪಡುಬಿದ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಸ್ಥಾವರಕ್ಕೆ (ಯುಪಿಸಿಎಲ್) ಚೆನ್ನೈಯ ಹಸಿರು ಪೀಠವು
52 ಕೋಟಿ ರೂ. ದಂಡ ವಿಧಿಸಿದೆ. ನಂದಿಕೂರು ಜನಜಾಗೃತಿ ಸಮಿತಿಯು 2005ರಲ್ಲಿ ಹೂಡಿದ್ದ ದಾವೆಯ ವಿಚಾರದಲ್ಲಿ ಈ ದಂಡ ವಿಧಿಸಲಾಗಿದೆ. ಪರಿಸರ ನಿಯಮಗಳನ್ನು ಉಲ್ಲಂಸಿರುವುದು ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದನ್ನು ಪರಿಗಣಿಸಿ 52 ಕೋಟಿ, 2 ಲಕ್ಷದ 50 ಸಾವಿರ ರೂ. ದಂಡ ಪಾವತಿಸುವಂತೆ ಆದೇಶಿಸಿದೆ. ಹಸಿರು ಪೀಠವು ಎಲ್ಲ ಮೊತ್ತವನ್ನು ಮುಂದಿನ ಮೂರು ತಿಂಗಳುಗಳೊಗಾಗಿ ಕೇಂದ್ರಿಯ ಪರಿಸರ ನಿಯಂತ್ರಣಾ ಮಂಡಳಿಗೆ ಪಾವತಿಸುವಂತೆ ಹೇಳಿದೆ. ಪರಿಸರ ಸುರಕ್ಷೆಗಾಗಿ ದಂಡವನ್ನು ಮತ್ತೆ ಬಳಸಿಕೊಳ್ಳುವಂತೆಯೂ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ನಿರ್ದೇಶಿಸಿದೆ.