-->

ತನ್ನ ಪ್ರಿಯಕರನ ಜೊತೆ ಸಲುಗೆಯಿಂದ ಇದ್ದ ಯುವತಿಯೊಬ್ಬಳ ಮೇಲೆ ಸುಪಾರಿ ಕೊಟ್ಟು ಗ್ಯಾಂಗ್ ರೇಪ್..!!

ತನ್ನ ಪ್ರಿಯಕರನ ಜೊತೆ ಸಲುಗೆಯಿಂದ ಇದ್ದ ಯುವತಿಯೊಬ್ಬಳ ಮೇಲೆ ಸುಪಾರಿ ಕೊಟ್ಟು ಗ್ಯಾಂಗ್ ರೇಪ್..!!

 

 ಹೈದರಾಬಾದ್​: ತನ್ನ ಪ್ರಿಯಕರ ಇನ್ನೊಬ್ಬಳ ಜತೆ ಸಲುಗೆಯಿಂದ ಇರುವುದನ್ನು ಸಹಿಸದ ಯುವತಿಯೊಬ್ಬಳು ಸುಪಾರಿ ಕೊಟ್ಟು ಆಕೆಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಮೇ 26 ರಂದು ಈ ಘಟನೆ ನಡೆದಿದ್ದು ಇದೀಗ ಬೆಳಕಿದೆ ಬಂದಿದೆ. 

ಗಾಯತ್ರಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ ಈಕೆ ಹೈದರಾಬಾದ್​ನ ಕೊಂಡಾಪುರದ ನಿವಾಸಿ. 
ಐವರು ಪುರುಷರಿಗೆ ಹಣ ಕೊಟ್ಟ ಪ್ರಿಯಕರನ ಇನ್ನೋರ್ವ ಗೆಳತಿಯನ್ನು ಗ್ಯಾಂಗ್​ರೇಪ್​ ಮಾಡಿಸಿದ್ದಾಳೆ. 
 

ಆರೋಪಿ ಗಾಯತ್ರಿ ತನ್ನ ಗೆಳೆಯನ ಜತೆ ಲಿವ್​ ಇನ್​ ಸಂಬಂಧದಲ್ಲಿ ಇದ್ದಳು. ಆಕೆಯ ಪ್ರಿಯಕರ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದನು. ಆತ ಹೋಗುತ್ತಿದ್ದ ಕೋಚಿಂಗ್ ಸೆಂಟರ್ಗೆ ಯುವತಿಯೊಬ್ಬಳು ಕೋಚಿಂಗ್​ಗೆ ಬರುತ್ತಿದ್ದಳು. ಇವರಿಬ್ಬರ ಮೇಲೆ ಗಾಯತ್ರಿಗೆ ಅನುಮಾನ ಶುರುವಾಗಿದೆ. ತನ್ನ ಪ್ರಿಯಕರ ಆಕೆಯ ಜತೆ ಸಂಬಂಧ ಹೊಂದಿದ್ದಾನೆ ಎಂದು ಅನ್ನಿಸಿದೆ.  ಇದಕ್ಕೆ ಪುಷ್ಟಿ ಕೊಡಲು ಎಂಬಂತೆ ಅವರಿಬ್ಬರ ನಡುವೆ ವಾಟ್ಸ್​ಆ್ಯಪ್​ನಲ್ಲಿ ನಡೆಯುತ್ತಿರುವ ಸಂಭಾಷಣೆಗಳಿಂದ ಈಕೆಗೆ ಮತ್ತಷ್ಟು ಸಂಶಯ ಶುರುವಾಗಿದೆ. ಇದೇ ಕಾರಣಕ್ಕೆ ಐವರಿಗೆ ಹಣವನ್ನು ಕೊಟ್ಟು ಆ ಯುವತಿಯನ್ನು ಅತ್ಯಾಚಾರ ಮಾಡುವಂತೆ ಹೇಳಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಗಾಯತ್ರಿ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದಾರೆ. 

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99