UDUPI : ಲಾರಿ ಢಿಕ್ಕಿ : ರಸ್ತೆ ಬಳಿ ನಿಂತಿದ್ದ ಪಾದಚಾರಿ ಸಾವು
Thursday, June 16, 2022
ರಸ್ತೆ ಬಳಿ ನಿಂತಿದ್ದ ಪಾದಚಾರಿ ಮೇಲೆ ಲಾರಿ ಹರಿದು ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ - ಪಡುಬಿದ್ರಿ ಜಂಕ್ಷನ್‌ನಲ್ಲಿ ನಡೆದಿದೆ. ಸಾಂತೂರು ಗ್ರಾಮದ ನಿವಾಸಿ ಜಯರಾಮ ಆಚಾರ್ಯ (51) ಮೃತಪಟ್ಟವರು. ಪಡುಬಿದ್ರಿಯ ಕಾರ್ಕಳ ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿ-66 ರ ಬದಿಯಲ್ಲಿ ರಸ್ತೆ ದಾಟಲು, ಜಯರಾಮ ಆಚಾರ್ಯ ನಿಂತಿದ್ದಾಗ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಗಲೇ ಅವರು ಮೃತಪಟ್ಟಿದ್ದಾಗಿ ವೈಧ್ಯರು ಖಚಿತಪಡಿಸಿದರು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.