-->

ಮಂಗಳೂರಿನಲ್ಲಿ 5 ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕಿ ಸಾವು!

ಮಂಗಳೂರಿನಲ್ಲಿ 5 ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕಿ ಸಾವು!


 ಮಂಗಳೂರು: ನಗರದ ಕಂಕನಾಡಿಯಲ್ಲಿ 5 ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.

  ಕಂಕನಾಡಿಯ vishwas crown ಅಪಾರ್ಟ್ಮೆಂಟ್ ನ ಪ್ಲಾಟ್  ನಲ್ಲಿ ವಾಸವಿರುವ  ಮಹಮದ್ ಇಂತಿಯಾಜ್ ಅವರ ಪುತ್ರಿ ಸೆಹರ್ ಇಂತಿಯಾಜ್ (15 ವರ್ಷ) ಮೃತಪಟ್ಟ ಬಾಲಕಿ.


 ಜೂನ್ 15 ರಂದು ಸಂಜೆ 04-30 ಗಂಟೆಗೆ  ಸೆಹರ್ ಇಂತಿಯಾಜ್ (15 ) ರವರು ಮನೆಯ ಹಾಲ್ ಗೆ ತಾಗಿಕೊಂಡಿರುವ ಬಾಲ್ಕನಿಯ ಸೈಡ್ ಕರ್ಟನ್ ಗಳನ್ನು ಸರಿ ಮಾಡುವ ಸಲುವಾಗಿ ಕುರ್ಚಿಯ ಮೇಲೆ ಹತ್ತಿ ಸರಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ ಬಿದ್ದಿದ್ದಾಳೆ. ಕಟ್ಟಡದ 5ನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಬಾಲಕಿ ಪ್ರಜ್ಞಾಹೀನಳಾಗಿ ದ್ದು ಗಾಯಗೊಂಡ ಆಕೆಯನ್ನು ಮನೆಯವರು ಮತ್ತು ಅಪಾರ್ಟ್ಮೆಂಟ್ನ ಜನರು ಕೂಡಲೇ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಆಕೆ ಮೃತಪಟ್ಟಿದ್ದಾಳೆ. 

ಸೆಹರ್ ಇಂತಿಯಾಜ್ ಇವರು ಬಿಜೈ ಲೂಡ್ಸ್  ಸೆಂಟ್ರಲ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದರು. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99