UDUPI: ನದಿ ನೀರು ಕಲುಷಿತ : ಲಕ್ಷಾಂತರ ರೂ ಮೌಲ್ಯದ ಮೀನುಗಳ ಸಾವು
Wednesday, June 22, 2022
ನದಿ ನೀರು ಕಲುಷಿತಗೊಂಡ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಪಂಜರ ಮೀನುಗಳು ಹಾಗೂ ನದಿ ಮೀನುಗಳು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿಯ ಕಾಮಿನಿ ನದಿಯಲ್ಲಿ ನಡೆದಿದೆ.
ಮಳೆ ಜೋರಾಗಿ ಬಂದು, ನೀರು ಕಪ್ಪು ಬಣ್ಣಕ್ಕೆ ತಿರುಗಿ ಕಲುಷಿತಗೊಂಡಿದ್ದು, ಪರಿಣಾಮ ಎರಡು ಪಂಜರದಲ್ಲಿ ಸಾಕಿದ್ದ ಸುಮಾರು ಒಂತ್ತು ಟನ್ ಮೀನುಗಳು ಹಾಗೂ ನದಿಯ ಮೀನುಗಳು ಸತ್ತು ಹೋಗಿ, ಪರಿಸರದಾದ್ಯಂತ ದುರ್ವಾಸನೆಯಿಂದ ಕೂಡಿದೆ.
ಇಲ್ಲಿನ ಸ್ನೇಹಿತ್ ಮತ್ತು ನಿತಿನ್ ಅವರ ಆರು ಮಂದಿಯ ತಂಡ, ಕಾಡಿಪಟ್ಣ ಹಾಗೂ ನಡಿಪಟ್ಣದ ಜಾರಂದಾಯ ದೇವಸ್ಥಾನದ ಬಳಿ ಆರು ತಿಂಗಳ ಹಿಂದೆ ಪಂಜರ ಮೀನು ಸಾಕಾಣಿಕೆ ಆರಂಭಿಸಿದ್ದರು. ಪಂಜರಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿದರು. ನದಿ ನೀರು ಕಲುಷಿತಗೊಂಡ ಪರಿಣಾಮ ಲಕ್ಷಾಂತರ ರೂ ಮೌಲ್ಯದ, ಎರಡು ಪಂಜರದಲ್ಲಿ ಸಾಕಿದ್ದ ಸುಮಾರು ಒಂತ್ತು ಟನ್ ಮೀನುಗಳು ಸತ್ತು ಹೋಗಿವೆ. ಅಲ್ಲದೆ ಹೊಳೆಯ ನೀರು ಕೃಷಿ ಭೂಮಿಗೂ ಆವರಿಸಿರುವುದರಿಂದ ಕೃಷಿ ಭೂಮಿಗೂ ಹಾನಿಯಾಗಿದೆ. ಈ ಭಾಗದಲ್ಲಿ ಇರುವ ಹೆಚ್ಚುತ್ತಿರುವ ಕೈಗಾರಿಕೆಗಳಿಂದಾಗಿ ಅಲ್ಲಿ ಹೊರಬಿಡುವ ರಾಸಾಯನಿಕ ಮಿಶ್ರಿತ ನೀರಿನಿಂದ ಮೀನುಗಳು ಸತ್ತುಹೋಗಿದ್ದು, ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ..