
UDUPI : ಮೆಹಂದಿಯಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
Wednesday, June 22, 2022
ಮದುವೆಯ ಮುನ್ನ ನಡೆಯುವ ಮೆಹಂದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿಯೊಬ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದ ಘಟನೆ ಉಡುಪಿ ನಗರದ ಅಂಬಾಗಿಲಿನ ಮನೆಯೊಂದರಲ್ಲಿ ನಡೆದಿದೆ. ಗಣಪತಿ ಆಚಾರ್ಯ (56) ಮೃತ ವ್ಯಕ್ತಿ.
ನಿನ್ನೆ ರಾತ್ರಿ ಅಂಬಾಗಿಲು ಪುತ್ತೂರಿನಲ್ಲಿ ನೆರೆಮನೆಯ ಸಂಬಂಧಿಕರ ಮೆಹೆಂದಿಯಲ್ಲಿ ಭಾಗವಹಿಸಿದ್ದರು.ಸ್ನೇಹಿತರು ಮತ್ತು ಸಂಬಂಧಿಕರ ಜೊತೆ ನೃತ್ಯ ಮಾಡುತ್ತಿದ್ದ ಗಣಪತಿ ಆಚಾರ್ಯ, ಸುಸ್ತಾಗಿ ಚೈರ್ ನಲ್ಲಿ ಕುಳಿತಿದ್ದು, ಕುಳಿತ ಕೆಲವೇ ಕ್ಷಣದಲ್ಲಿ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡುಹೋಗಲಾಯಿತಾದರೂ ಅವರು ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.