UDUPI : ಮೋದಿಗೆ ಸಿಹಿ ತಿನಿಸು ತಯಾರಿಸಿದ್ದು ಕುಂದಾಪುರದ ಬಾಣಸಿಗ
Wednesday, June 22, 2022
ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುಂದಾಪುರ ಮೂಲದ ಬಾಣಸಿಗರೋರ್ವರು ಮೈಸೂರು ಪಾಕ್ ಉಣ ಬಡಿಸಿದ್ದಾರೆ.
ಕುಂದಾಪುರದ ನೆಂಪು ನಿವಾಸಿಯಾಗಿರುವ ನರಸಿಂಹ ಪೂಜಾರಿ ಅವರು ಮೈಸೂರು ಪಾಕ್ ತಯಾರಿಸಿದವರು. ಬೆಂಗಳೂರಿನ ಗಾಂಧಿ ಬಜಾರಿನ ಎ.ವಿ.ಎಸ್. ನಾಗರಾಜ್ ತೀರ್ಥಹಳ್ಳಿ ಅವರಿಗೆ ಸೇರಿದ ಕ್ಯಾಟರಿಂಗ್ ಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ನರಸಿಂಹ ಪೂಜಾರಿ ಬಾಣಸಿಗರಾಗಿದ್ದಾರೆ.
ಈ ಹಿನ್ನಲೆಯಲ್ಲಿ ಮೋದಿ ಅವರ ಮೈಸೂರು ಅರಮನೆಯ ಔತಣ ಕೂಟಕ್ಕೆ ಮೈಸೂರು ಪಾಕ್ ತಯಾರಿ ಸುವ ಜವಾಬ್ದಾರಿ ನರಸಿಂಹ ಅವರಿಗೆ ದೊರೆತಿತ್ತು. ನರಸಿಂಹ ಪೂಜಾರಿ ಅವರ ತಂಡ 20 ಬಗೆಯ ಖಾದ್ಯಗಳನ್ನು ತಯಾರಿಸುವಂತೆ ಆಯೋಜಕರು ಆದೇಶಿಸಿದ್ದರು. ಉಳಿದಂತೆ ಬೇರೆ ಬೇರೆ ಕಡೆಯಿಂದಲೂ ಖಾದ್ಯಗಳು ತಯಾರಾಗಿದ್ದವು, ನರಸಿಂಹ ಪೂಜಾರಿ ಅವರ ತಂಡ ಭೋಜನ ಜವಬ್ದಾರಿ ವಹಿಸಿಕೊಂಡಿತ್ತು. ಭೋಜನದ ಬಳಿಕ ನರಸಿಂಹ ಪೂಜಾರಿ ಅವರ ತಂಡ ಪ್ರಧಾನಿ ಮೋದಿ ಅವರೊಂದಿಗೆ ಪೋಟೊ ತೆಗೆಸಿಕೊಂಡಿದ್ದಾರೆ.