ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

'777 Charlie' ಸಿನಿಮಾ ಬಳಿಕ Labrador ತಳಿಯ ನಾಯಿಗಳಿಗೆ ಸಂಕಷ್ಟ

ಮಂಗಳೂರು: ನಾಯಿಯ ಕಥಾ ಪಾತ್ರದ ಹಿನ್ನೆಲೆಯಲ್ಲಿ ಮೂಡಿಬಂದ ಚಿತ್ರವೇ '777 ಚಾರ್ಲಿ'. ಈ ಚಿತ್ರದಲ್ಲಿ Labrador ತಳಿಯ ನಾಯಿಯನ್ನು ಬಳಸಿಕೊಳ್ಳಲಾಗಿತ್ತು. ಈ ಬಳಿಕ ಈ ತಳಿಯ ನಾಯಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇದು ಅಪಾಯಕಾರಿ ಬೆಳವಣಿಗೆ ಎಂದು ಶ್ವಾನಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸಿನಿಮಾ ನೋಡಿದ ಬಳಿಕ ತಮಗೂ ಅಂತಹ ನಾಯಿ ಬೇಕೆಂಬುದು ಹಲವರ ಆಸೆ. ಬೇಡಿಕೆ ಹಿನ್ನೆಲೆಯಲ್ಲಿ ‌ಮಾರಾಟಗಾರರು ಈ ತಳಿಯ ನಾಯಿಮರಿಗಳನ್ನು ದೂರದೂರಿನ‌ ಗ್ರಾಹಕರಿಗೆ ಬಸ್ಸಿನಲ್ಲೋ ಮತ್ತಿತರ ವಾಹನಗಳಲ್ಲೋ‌ ಯಾವುದೇ ಸುರಕ್ಷೆ ಇಲ್ಲದೆ ಕಳಿಸುತ್ತಾರೆ. 

ಇದು ಪ್ರಾಣ ಹಾನಿಗೆ ಕಾರಣವಾಗಬಹುದು ಎಂದು ಆತಂಕ‌ ವ್ಯಕ್ತಪಡಿಸಿದ್ದಾರೆ ಶ್ವಾನಪ್ರಿಯ ಅರುಲ್.

ಅಲ್ಲದೇ ನಾಯಿಗಳಿಗೆ ಬೇಡಿಕೆ ಹಿನ್ನೆಲೆಯಲ್ಲಿ ಈ ತಳಿಯ ಹೆಣ್ಣು ನಾಯಿಗಳಿಗೆ ನಿರಂತ ಗರ್ಭಧಾರಣೆ ಮಾಡುವ ಮೂಲಕವೂ ಚಿತ್ರ ಹಿಂಸೆ ನೀಡಲಾಗುತ್ತದೆ. ಅವುಗಳ ಅವಧಿ ಮುಗಿದ ಬಳಿಕ ಅದನ್ನು ಬೀದಿಯಲ್ಲಿ ಉಪೇಕ್ಷಿಸುತ್ತಾರೆ ಎಂದು ಅರುಲ್ ಆತಂಕ ವ್ಯಕ್ತಪಡಿಸಿದರು.
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW