UDUPI : ವನ್ಯಜೀವಿ ಬೇಟೆ: ಐವರ ಬಂಧನ
Wednesday, June 29, 2022
ವನ್ಯಜೀವಿಗಳನ್ನು ಕೊಂದ ಬೇಟೆಗಾರರನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಶಿರೂರಿನಲ್ಲಿ ನಡೆದಿದೆ. ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಪೇತ್ರಿ ನಿವಾಸಿಗಳಾದ ರಾಘವೇಂದ್ರ, ಪ್ರಶಾಂತ್, ಅರುಣ್, ಚೇತನ್ ಹಾಗೂ ದೀಕ್ಷಿತ್ ಅವರನ್ನು ಬಂಧಿಸಲಾಗಿದೆ. ಶಿರೂರು ಮೂರುಕ್ಕೆ ಪರಿಸರದಲ್ಲಿ ಕಾಡುಪ್ರಾಣಿ ಶಿಕಾರಿ ನಡೆಸಿದ ತಂಡವೊಂದು ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಶಿರೂರು ಮೂರುಕೈಯಿಂದ ಸಾಯ್ದರಕಟ್ಟೆ ಕಡೆಗೆ ಪಯಣಿಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು, ಸಾಯ್ಡರಕಟ್ಟೆ ಚೆಕ್ ಪೋಸ್ಟ್‌ನಲ್ಲಿ ಕಾರು ಅಡ್ಡಗಟ್ಟಿ ಪರಿಶೀಲಿಸಿದಾಗ ವನ್ಯಜೀವಿಗಳ ಶಿಕಾರಿ ನಡೆಸಿರುವುದು ಬೆಳಕಿಗೆ ಬಂದಿದೆ. ಕಾರಿನಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ರಕ್ತಸಿಕ್ತವಾದ ಬರ್ಕ, ಒಂದು ಮೊಲ ಕಂಡುಬಂದಿದೆ. ಅಲ್ಲದೆ ನಳಿಕೆ ತೋಟೆ ಕೋವಿ ಪತ್ತೆಯಾಗಿದೆ. ಕಾರು, ಸತ್ತ ಬರ್ಕ, ಕಂದು ಬಣ್ಣದ ಮೊಲ, ನಳಿಕೆ ತೋಟೆ ಕೋವಿ, 4 ತೋಟೆಗಳು, 1 ಖಾಲಿ ತೋಟೆ, ಸಣ್ಣ ಟಾಚ್ ಲೈಟ್, ಒಂದು ಜತೆ ಹೆಡ್ ಟಾರ್ಚ್ ಲೈಟ್, ನಗದು ರೂ.1970 ಹಾಗೂ 5 ಮೊಬೈಲ್ ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.