
UDUPI : ಉದಯಪುರದ ನಡೆದಿರುವ ಘಟನೆ ಖಂಡನೀಯ : ಅಶ್ವಥ್ ನಾರಾಯಣ್
ಉದಯಪುರದಲ್ಲಿ ನಡೆದಿರುವ ಘಟನೆ ಖಂಡನೀಯ, ಇದಕ್ಕೆ ನಾವು ಜಗ್ಗಲ್ಲ ಅಂತ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಕುಂದಾಪುರದಲ್ಲಿ ಮಾತನಾಡಿದ ಅವರು, ನಾವು ವಸುದೈವ ಕುಟುಂಬಕಂ ಕಲ್ಪನೆಯೊಂದಿಗೆ ವಿಶ್ವದೊಂದಿಗೆ ಶಾಂತಿಯಿಂದ ಬಾಳುತ್ತಿದ್ದೇವೆ. ಅಮಾಯಕನ ಕುತ್ತಿಗೆ ಕಡಿಯುವ ಮೂಲಕ ಗೊಡ್ಡು ಬೆದರಿಕೆ ನಮಗೆ ಹಾಕಿರುವುದಲ್ಲ, ಕೃತ್ಯ ಎಸಗಿದ ವ್ಯಕ್ತಿಗಳ ಮನಸ್ಥಿತಿಯನ್ನು ಈ ಕೌರ್ಯದ ಮೂಲಕ ಪ್ರದರ್ಶಿಸಿದ್ದಾರೆ. ಇದು ಅವರ ವಿನಾಶ, ಆ ವ್ಯಕ್ತಿಗಳ ವಿನಾಶ, ಧರ್ಮದ ಪರವಾಗಿ ಒಳ್ಳೆಯ ಸಂದೇಶ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರೀತಿಯ ಭಾವನೆ, ಸಂಸ್ಕೃತಿ, ಧರ್ಮವನ್ನು ಕಾಪಾಡಿಕೊಂಡು, ಅನುಷ್ಠಾನ ಮಾಡಿ ನಡೆಸಿಕೊಂಡು ಹೋಗಲು ಅವಕಾಶವಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾವ ಧರ್ಮದಲ್ಲೂ ಹೇಳಿಲ್ಲ. ಅಧರ್ಮಿಗಳು, ಮೂಡರು, ಮುಟ್ಟಾಳರು ಇದನ್ನು ಮಾಡಿದ್ದಾರೆ ಈ ಘಟನೆಯನ್ನು ಖಂಡಿಸುತ್ತೇನೆ ಎಂದರು.