UDUPI : ಕಾಲೇಜಿಗೆ ಕಾಲಿಟ್ಟ ಸಾಧಕಿ ಶ್ರಾವ್ಯಾ
Thursday, June 30, 2022
ಅನಾರೋಗ್ಯ ಕಾರಣದಿಂದ ಕಳೆದ ಮೂರು ವರ್ಷ ಶಾಲೆಯಿಂದ ದೂರು ಉಳಿದು 8, 9ನೇ ತರಗತಿ ಪಾಸಾಗಿ ಎಸ್‌ಎಸ್‌ಎಸಿಯಲ್ಲಿ ಮಲಗಿಕೊಂಡೇ ಓದಿ 580 ಅಂಕದಿಂದ ಪಾಸಾದ ಉಡುಪಿಯ ಕುಂದಾಪುರದ ಶ್ರಾವ್ಯ ಕಾಲೇಜಿಗೆ ಕಾಲೇಜಿಗೆ ಕಾಲಿಟ್ಟಿದ್ದಾಳೆ. ಕಳೆದ ಮೂರು ವರ್ಷಗಳಿಂದ ಕರುಳಿನ ಸಮಸ್ಯೆಯಿಂದ ಶ್ರಾವ್ಯ ಬಳಲುತ್ತಿದ್ದಳು. ಈ ನಡುವೆ ತೀವ್ರ ಅನಾರೋಗ್ಯಕ್ಲೆ ತುತ್ತಾಗಿ ಎಸ್‌ಎಸ್‌ಎಸಿಯಲ್ಲಿ ಮಲಗಿಕೊಂಡೇ ಓದಿ ಉತ್ತಮ ಅಂಕ ಗಳಿಸಿ ಸುದ್ದಿಯಾಗಿದ್ದಳು. ಮಾಧ್ಯಮದಲ್ಲಿ ಸುದ್ದಿಯಾದ ಬಳಿಕ ದಾನಿಗಳು ಈಕೆಗೆ ಸಹಾಯ ಹಸ್ತ ಚಾಚಿದ್ದರು. ಸದ್ಯ ಚೇತರಿಸಿಕೊಂಡು ತಾಯಿಯೊಂದಿಗೆ ಕಾಲೇಜಿಗೆ ಬಂದ ಶ್ರಾವ್ಯಳನ್ನು, ಕಾಲೇಜಿನ ಪ್ರಾಂಶುಪಾಲರು ಹೂ ನೀಡಿ ಸ್ವಾಗತಿಸಿದರು. ವಿಜ್ಞಾನ ವಿಭಾಗಕ್ಕೆ ದಾಖಲಾದ ಈಕೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಈಕೆಗೆ ಸಹಕಾರ ಕೊಡಿ ಅಂತ ವಿನಂತಿಸಿದ್ದರು. ಹಲವು ವರ್ಷಗಳಿಂದ ಶೈಕ್ಷಣಿಕ ವಾತಾವರಣದಿಂದ ದೂರ ಉಳಿದು ಮತ್ತೆ ಕಾಲೇಜು ಪ್ರವೇಶಿಸಿದ ಸಂತಸ ಶ್ರಾವ್ಯ ಮೊಗದಲ್ಲಿ ಕಾಣುತ್ತಿತ್ತು..