UDUPI : ಹೃದಯಾಘಾತದಿಂದ ಗದ್ದೆಯಲ್ಲೇ ಸಾವನ್ಪಿದ ಟ್ರಾಕ್ಟರ್ ಚಾಲಕ
Thursday, June 30, 2022
ಗದ್ದೆ ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ಚಾಲಕ ಹೃದಯಾಘಾತದಿಂದ ಗದ್ದೆಯಲ್ಲೇ ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ನಡೆದಿದೆ.
ಹರಿಹರ ಮೂಲದ ರಾಜು ಮೃತ ಪಟ್ಟ ಟ್ರ್ಯಾಕ್ಟರ್ ಚಾಲಕ. ದೀಟಿ ಗ್ರಾಮದಲ್ಲಿ ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ಉಳಿಯುತ್ತಿದ್ದ ರಾಜು, ಟ್ರ್ಯಾಕ್ಟರ್ ಮೇಲಿದ್ದಾಗ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದ್ದು, ಮನೆಯವರು ಬಂದು ನೋಡುವಾಗ, ಗದ್ದೆಯಲ್ಲಿ ಯಾರು ಇಲ್ಲದ ಹಿನ್ನೆಲೆ ಟ್ರಾಕ್ಟರ್‌ನಿಂದ ಕೆಳಗೆ ಬಿದ್ದು ಗದ್ದೆಯಲ್ಲಿದ್ದ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಾಜು ಇಹಲೋಕ ತ್ಯಜಿಸಿದ್ದರು. ಹರಿಹರ ಮೂಲದ ರಾಜು ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ.