-->

UDUPI : ಅಪಹರಣ ಕಥೆ ಕಟ್ಟಿ ಪೋಷಕರಲ್ಲಿ ಹಣ ಪೀಕಿಸಲು ಹೊರಟ ಮಗನ‌ ಅರೆಸ್ಟ್

UDUPI : ಅಪಹರಣ ಕಥೆ ಕಟ್ಟಿ ಪೋಷಕರಲ್ಲಿ ಹಣ ಪೀಕಿಸಲು ಹೊರಟ ಮಗನ‌ ಅರೆಸ್ಟ್

ಅಪಹರಣದ್ದೇನೆ ಅಂತ ಕಥೆ ಕಟ್ಟಿ, ಪೋಷಕರಲ್ಲಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಮಗನನ್ನು ಕಂಡು ಪೋಷಕರು ಮತ್ತು ಆತನನ್ನು ಹುಡುಕಲು ಹೋದ ಪೊಲೀಸರು ದಂಗಾದ
ಘಟನೆ ಉಡುಪಿಯಲ್ಲಿ ನಡೆದಿದೆ. ವರುಣ್ ನಾಯಕ್ (25) ಅಪಹರಣ ನಾಟಕವಾಡಿದ ಯುವಕ. ಜೂನ್ 26 ರಂದು ಮುಂಜಾನೆ ಮೂರು ಗಂಟೆಗೆ ವರುಣ್, ತಂದೆ ತಾಯಿಗೆ ತನ್ನ ಮೊಬೈಲ್‌ನಿಂದ ಕರೆ ಮಾಡಿ, ನನ್ನನ್ನು ಯಾರೋ ಅಪಹರಿಸಿದ್ದಾರೆ,  ಐದು ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಅಂತ ಪೋಷಕರಲ್ಲಿ ಆತಂಕದಲ್ಲೊ ಹೇಳಿಕೊಂಡಿದ್ದ. ಇದರಿಂದ ಭಯಗೊಂಡ ಪೋಷಕರು ಉಡುಪಿ ನಗರ ಠಾಣೆಯಲ್ಲಿ ಮಗನ ಅಪಹರಣ ಕುರಿತು ದೂರು ನೀಡಿದ್ದಾರೆ. 

ದೂರು ದಾಖಲಿಸಿಕೊಂಡ ನಗರ ಠಾಣೆ ಪೊಲೀಸ್ ಅಧಿಕಾರಿಗಳು ಮೇಲಾಧಿಕಾರಿಗಳ ಸೂಚನೆಯಂತೆ, ಯುವಕನ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಯುವಕನ ಮೊಬೈಲ್ ಲೊಕೇಷನ್ ಪತ್ತೆ ಮಾಡುವಾಗ ಅದು ಗೋವಾದಲ್ಲಿತ್ತು. ಕೂಡಲೇ ಗೋವಾಕ್ಕೆ  ಸಿಬ್ಬಂದಿಯನ್ನು ಕಳುಹಿಸಿಕೊಡಲಾಯಿತು, ಈ ವೇಳೆ ಮೊಬೈಲ್ ಲೊಕೇಷನ್ ಪರಿಶೀಸಿ ಆ ಸ್ಥಳಕ್ಕೆ ಹೋದಾಗ ಪೊಲೀಸರಿಗೆ ಶಾಕ್ ಆಗಿತ್ತು, ಆದರೆ ಅಪಹರಣಕ್ಕೊಳಗಾಗಿದ್ದೇನೆ ಎಂದಿದ್ದ ಯುವಕ ತನ್ನ ಗೆಳೆಯರೊಂದಿಗೆ ಗೋವಾದ ಕ್ಯಾಸಿನೋ ಒಂದರಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ. ಬಳಿಕ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದಾಗ ತಾನು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಸರಿಯಾದ ಕೆಲಸವಿಲ್ಲದೆ ತನ್ನ ಗೆಳೆಯರೊಂದಿಗೆ ಮೋಜು ಮಸ್ತಿ ಮಾಡಲು ಕೈಯಲ್ಲಿ ಹಣವಿಲ್ಲದಿದ್ದಾಗ ತಲೆಗೆ ಬಂದಿದ್ದು ತನ್ನ ಪೋಷಕರ ಬಳಿ ಇರುವ ಹಣವನ್ನು ಹೇಗಾದರೂ ಮಾಡಿ ಲಪಟಾಯಿಸುವ ಉದ್ದೇಶದಿಂದ ನಾನು ಅಪಹರಣದ ನಾಟಕವಾಡಿ ನನ್ನದೇ ಮೊಬೈಲ್ ನಿಂದ ತಾಯಿಗೆ ಕರೆ ಮಾಡಿ ನನ್ನನ್ನು ಯಾರೋ ಅಪಹರಿಸಿದ್ದಾರೆ ಅವರು ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಅಲ್ಲದೆ ಹಣ ನೀಡದಿದ್ದಲ್ಲಿ ನನ್ನನ್ನು ಕೊಲೆ ಮಾಡುತ್ತಾರೆ ಎಂದು ಅಳುತ್ತಾ ಹೇಳಿದ್ದೆ ಅಂತ  ತಪ್ಪನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಪೋಷಕರ ಹಣ ಎಗರಿಸುವ ಉದ್ದೇಶ ಹಾಗೂ ಪೊಲೀಸರ ಸಮಯವನ್ನು ವ್ಯರ್ಥಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ವಿರುದ್ಧ ಕ್ರಮ ಕೈಗೊಂಡಿದ್ದು ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99