UDUPI: ಇಸ್ಪಿಟ್ ಜುಗಾರಿ ಅಡ್ಡಕ್ಕೆ ದಾಳಿ ; ಇಬ್ಬರ ಬಂಧನ
Tuesday, June 28, 2022
ಇಸ್ಪಿಟ್ ಜುಗಾರಿ ಅಡ್ಡಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, 1080 ರೂ. ನಗದು ವಶಪಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಮದಲ್ಲಿ ನಡೆದಿದೆ. ಕೋಟೇಶ್ವರ ಗ್ರಾಮದ 29ವರ್ಷದ ಪ್ರಸಾದ್ ಪೂಜಾರಿ, ತೆಕ್ಕೆಟ್ಟೆ ಗ್ರಾಮದ 36 ವರ್ಷದ ಮಂಜುನಾಥ ಕಾಂಚನ್ ಬಂಧಿತರು. ಕೊರವಾಡಿ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಂದಾಪುರ ಪೊಲೀಸರು ದಾಳಿ ನಡೆಸಿದರು. ಈ ವೇಳೆ 9 ಮಂದಿಯ ಪೈಕಿ 7 ಜನರು ಅಲ್ಲಿಂದ ಓಡಿ ಹೋಗಿದ್ದಾರೆ. ಓಡಿ ಹೋದವರು ಅರುಣ್, ಪ್ರವೀಣ್, ವಿಶ್ವನಾಥ, ಶಶಿಧರ, ರೋಹಿತ್, ಭಾಸ್ಕರ ಮತ್ತು ಪಪ್ಪಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ