UDUPI : ಮದ್ಯಸೇವಿಸಿ ಚಾಲಕನ ಅವಾಂತರ
Monday, June 27, 2022
ಚಾಲಕನೊಬ್ಬ ಮದ್ಯಸೇವಿಸಿ ವಾಹನ ಚಲಾಯಿಸಲಾಗದೆ, ರಸ್ತೆಯಲ್ಲೇ ಮಲಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಘಟನೆ ಉಡುಪಿ ನಗರ ಬಸ್ ನಿಲ್ದಾಣದ ಬಳಿ ನಡೆದಿದೆ.
ಸಿಟಿ ಬಸ್ ನಿಲ್ದಾಣದ ಹತ್ತಿರದ ಪೆಟ್ರೋಲ್ ಬಂಕ್ ಬಳಿಯ ರಿವೈಡರ್ ಹತ್ತಿರ ಈತ ತನ್ನ ಗೂಡ್ಸ್ ಟೆಂಪೋ ನಿಲ್ಲಿಸಿ ಮಲಗಿದ್ದ, ಇದನ್ನು ನೋಡಿದ ಸಾರ್ವಜನಿಕರು
ಒಂದು ಕ್ಷಣಕಕ್ಕಾವಿಕ್ಕಿಯಾಗಿದ್ದಾರೆ. ಈತನ ಬಾಯಿಂದ ಎಣ್ಣೆ ಘಾಟಿನ ವಾಸನೆ ಮೂಗಿಗೆ ಬಡಿಯುತ್ತಿತ್ತು.
ಇದೊಂದು ಟೈಟ್ ಪಾರ್ಟಿ ಎಂದುಕೊಂಡು ವಾಹನ ಸವಾರರು ಮುಂದೆ ಹೋಗುತ್ತಿದ್ದರು. ಈ ವೇಳೆ ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾದ ಕಾರಣ , ಯಾರೋ ಒಬ್ಬರು ಬಂದು ಸ್ಥಳದಿಂದ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.