UDUPI : ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರಕ್ಕೆ ದುಮುಕಿದ ಮಹಿಳೆ ; ರಕ್ಷಿಸಿದ ಬೀಚ್ ಲೈಫ್ ಗಾರ್ಡ್ ಸಿಬ್ಬಂದಿ
Monday, June 27, 2022
ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರಕ್ಕೆ ದುಮುಕಿದ್ದು, ಈ ವೇಳೆ ಬೀಚ್ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ಉಡುಪಿ ಮಲ್ಪೆ ಬೀಚ್‌ನಲ್ಲಿ ನಡೆದಿದೆ.
ಮುಂಬೈ ಮೂಲದ 45 ವರ್ಷದ ಮಹಿಳೆಯೊಬ್ಬರ ಮಗನ ಜೊತೆಗೆ ಮಲ್ಪೆ ಬೀಚ್‌ಗೆ ಬಂದಿದ್ದರು. ಬೀಚ್‌ನಲ್ಲಿ ಮಳೆಯ ಕಾರಣ, ನೀರಿಗೆ ಇಳಿಯದಂತೆ ತಡೆಬೇಲಿ ಹಾಕಿದ್ದಾರೆ. ಮಹಿಳೆ ತಡೆ ಬೇಲಿ ದಾಟಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅಲ್ಲೇ ಇದ್ದ ಮಲ್ಪೆ ಬೀಚ್ ಲೈಫ್ ಗಾರ್ಡ್, ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.