
UDUPI : ಹಲಸಿನ ಹಣ್ಣು ತಿನ್ನಲು ಉಡುಪಿಯಲ್ಲಿ ಗೂಳಿ ಕಾಳಗ
ಹಲಸಿನ ಹಣ್ಣು ತಿನ್ನಲು ಗೂಳಿಗಳು ಕಾದಾಟ ನಡೆಸಿದ ದೃಶ್ಯ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ. ನಗರದ ಬ್ರಹ್ಮಗಿರಿ ಪರಿಸರದಲ್ಲಿ ನಿನ್ನೆ ಬೀಸಿದ ಗಾಳಿ ಮಳೆಗೆ ಸಾಕಷ್ಟು ಹಲಸಿನ ಹಣ್ಣುಗಳು ಉದುರಿದ್ದವು.
ಬಿದ್ದಿದ್ದ ಹಲಸಿನ ಹಣ್ಣುಗಳನ್ನು ತಿನ್ನಲು ಎರಡು ಗೂಳಿಗಳು ಹಲವು ನಿಮಿಷಗಳ ಕಾಲ ಕಾದಾಟ ನಡೆಸಿತು. ಈ ಕಾದಾಟ ತಡೆಯಲು ನಾಗರಿಕರು ಮುಂದಾದರೂ ಈ ಗೂಳಿಗಳು ಕ್ಯಾರೇ ಎನ್ನಲಿಲ್ಲ.