UDUPI ; ತೆಂಗಿನ ದರ ಕುಸಿತ ; ಸಂಕಷ್ಟದಲ್ಲಿ ಬೆಳೆಗಾರರು
Thursday, June 16, 2022
ತೆಂಗು ಬೆಳೆಯನ್ನೇ ನಂಬಿ ಜೀನವ ಸಾಗಿಸುವ ಸಾವಿರಾರು ಕುಟುಂಬ ಕರಾವಳಿಯಲ್ಲಿ ಇದೆ. ಆದ್ರೆ ಇತ್ತೀಚೆಗೆ ದಿನಗಳಲ್ಲಿ ತೆಂಗಿನ ದರದಲ್ಲಿ ದಿಢೀರ್ ಕುಸಿತ ಕಂಡಿದೆ. ಕಳೆದ ವರ್ಷ ಕೆಜಿಗೆ 35 ರಷ್ಟು ಇದ್ದ ತೆಂಗಿನ ದರ, ಈ ವರ್ಷ ಕೇವಲ 23 ರೂಪಾಯಿಗೆ ಕುಸಿತ ಕಂಡಿದೆ. ರೈತರು ತೆಂಗಿನ ಬೆಳೆ ಏರಿಕೆ ಆಗುತ್ತೆ ಅಂತ ಹಲವು ಸಮಯದಿಂದ ಕಾದು ಸದ್ಯ ಕಡಿಮೆ ದರಕ್ಕೆ ತೆಂಗಿನಕಾಯಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆದ್ರೆ ಕೃಷಿಕರಿಂದ ಕಡಿಮೆ ದರಕ್ಕೆ ಖರೀದಿ ಮಾಡಿದ್ರೂ, ಅಂಗಡಿಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ತೆಂಗಿನ ಎಣ್ಣೆ ದರ ಕೂಡ ಇಳಿಕೆಯಾಗಿಲ್ಲ, ಹೆಚ್ಚಾಗಿಯೇ ಇದೆ. ಬೆಳೆಗಾರರಿಗೆ ಮಾತ್ರ ಅತೀ ಕಡಿಮೆ ದರ ಸಿಗುತ್ತಿದೆ ಎನ್ನುವ ಬೇಸರ ರೈತರದ್ದು. ಹೀಗಾಗಿ ಆದಷ್ಟು ಶೀಘ್ರವಾಗಿ ಸರ್ಕಾರ ತೆಂಗಿನ ಬೆಳೆಗೆ ದರ ನಿಗದಿ ಮಾಡಿ, ಬೆಂಬಲ ಬೆಲೆ ಘೋಷಣೆ ಮಾಡಬೇಕು ಅಂತ ರೈತರು ಆಗ್ರಹಿಸಿದ್ದಾರೆ..