UDUPI : ಕರಾವಳಿ ಕಲಾವಿದನ ಕೈಚಳಕಕ್ಕೆ ಸಚಿನ್ ತೆಂಡೂಲ್ಕರ್ ಫಿದಾ
Thursday, June 16, 2022
ಅಶ್ವಥ ಎಲೆಯಲ್ಲಿ ಪ್ರಸಿದ್ಧ ವ್ಯಕ್ತಿಗಳ ಚಿತ್ರ ಮೂಡಿಸುವ ಅಪರೂಪದ ಕಲಾವಿದ ಉಡುಪಿಯ ಮರ್ಣೆ ಗ್ರಾಮದ ಯುವ ಕಲಾವಿದ ಮಹೇಶ್ ಮರ್ಣೆ ಪ್ರತಿಭೆಗೆ ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಫಿದಾ ಆಗಿದ್ದಾರೆ. ಈ ಬಾರಿ ಅಶ್ವಥ ಎಲೆಯಲ್ಲಿ ಕ್ರಿಕೆಟ್ ನ ದಂತಕತೆ ಸಚಿನ್ ತೆಂಡೂಲ್ಕರ್ ರವರ ಚಿತ್ರವನ್ನು 7 ನಿಮಿಷದಲ್ಲಿ ಲೀಫ್ ಆರ್ಟ್ ರಚಿಸಿ ಎಕ್ಸ್ ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಪುಟ ಸೇರಿದ್ದಾರೆ.ಈ ಸಾಧನೆಗಾಗಿ ಸಚಿನ್ ಅವರ ಅಪರೂಪದ ಫೋಟೋಗಳು ಮತ್ತು ಸಹಿ ಇರುವ ಸರ್ಟಿಫಿಕೇಟ್ ಮಹೇಶ್ ಕೈಸೇರಿವೆ. 2015ರಲ್ಲಿ 3500 ಐಸ್ ಕ್ರೀಮ್ ಕಡ್ಡಿ ಮತ್ತು 750 ಬೆಂಕಿಕಡ್ಡಿ ಯಿಂದ ರಚಿಸಿದ ಗಣಪತಿಯ ಕಲಾಕೃತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿ ಸಾಧನೆ ಮಾಡಿದ್ದರು. ಹಲವು ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರವನ್ನು ಅಶ್ವಥ ಎಲೆಯಲ್ಲಿ ರಚಿಸುವ ಮೂಲಕ ಮಹೇಶ್ ಮರ್ಣೆ ಈಗಾಗಲೇ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.