UDUPI : ಬೈಕ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆದಾರ ಸಾವು
Thursday, June 16, 2022
ಇತ್ತೀಚಿಗೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗುತ್ತಿಗೆದಾರರೊಬ್ಬರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ಪಿದ್ದಾರೆ. ಉಡುಪಿಯ ತೆಕ್ಕಟ್ಟೆ ಕಂಚಿಗಾರ್ ಬೆಟ್ಟು ಸುರೇಂದ್ರ ದೇವಾಡಿಗ(43) ಮೃತ ದುರ್ದೈವಿ. ಕೆಲದಿನಗಳ ಹಿಂದೆ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅವಗಡದಲ್ಲಿ ತಲೆಗೆ ತೀವ್ರ ತರಹದ ಗಾಯಗೊಂಡು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಸುರೇಂದ್ರ ದೇವಾಡಿಗ ಚಿಕಿತ್ಸೆ ಪಡೆಯುತ್ತಿದ್ದರು. ತೆಕ್ಕಟ್ಟೆ, ಕೋಟದಲ್ಲಿ ಕಿರು ಗುತ್ತಿಗೆ ಹಾಗೂ ಹಿಂದೂ ರುದ್ರಭೂಮಿ ನಿರ್ಮಾಣದ ಸ್ಪೇಷಲಿಸ್ಟ್ ಆಗಿ ಹೆಸರು ಪಡೆದಿದ್ದರು. ಹಲವು ಸಂಘಸಂಸ್ಥೆಗಳ ಸಾಮಾಜಿಕ ಚಟುವಟಿಕೆಯಲ್ಲಿ ತೋಡಗಿಕೊಂಡಿದ್ದರು.