UDUPI: ಆರೋಗ್ಯ ತಪಾಸಣೆಗೆಂದು ತೆರಳಿದ ಮಹಿಳೆಗೆ ವೈದ್ಯನಿಂದ ಕಿರುಕುಳ
Thursday, June 16, 2022
ಖಾಸಗಿ ಕ್ಲಿನಿಕ್‌ಗೆ ಹೋದ ಮಹಿಳೆಗೆ ವೈದ್ಯನೋರ್ವ ಕಿರುಕುಳ ನೀಡಿದ ಘಟನೆ ಉಡುಪಿಯ ಶಂಕರಪುರ ಎಂಬಲ್ಲಿ ನಡೆದಿದೆ. ಕಟಪಾಡಿ ಸಮೀಪದ ಶಂಕರಪುರ ಎಂಬಲ್ಲಿ, ಆರೋಗ್ಯ ತಪಾಸಣೆಗೆಂದು ಮಹಿಳೆಯೊಬ್ಬರು, ಪತಿಯೊಂದಿಗೆ ಶಂಕರಪುರದಲ್ಲಿರುವ ಖಾಸಗಿ ಕ್ಲಿನಿಕ್‌ಗೆ ಹೋಗಿದ್ದರು.
ಈ ವೇಳೆ ಡಾ| ಮುರಳೀಕೃಷ್ಣ ಭಟ್ ಅವರು ತಪಾಸಣೆ ನೆಪದಲ್ಲಿ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ವೈದ್ಯರ ವಿರುದ್ಧ ಮಹಿಳೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..