UDUPI: ಸಮುದ್ರ ಪಾಲಾಗುತ್ತಿದ್ದವರ ಜೀವ ಉಳಿಸಿದ ಜೀವ ರಕ್ಷಕದಳ
Monday, June 6, 2022
ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು
ಜೀವ ರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ನಡೆದಿದೆ. ಮೋಬಿನ್ ಸೋಫಿಯಾ ಅಹ್ಮದ್ ಮತ್ತು ಮೊಹಮ್ಮದ್ ಬದುಕಿ ಉಳಿದವರು. ಕಡಲು ಪ್ರಕ್ಷುಬ್ಧ ಆಗಿರುವ ಕಾರಣ ಜೀವ ರಕ್ಷಕ ದಳದವರು ಕಡಲ ಆಳಕ್ಕೆ ಹೋಗತೆ ಎಚ್ಚರಿಕೆ ನೀಡಿದರು. ಆದರೂ ಎಚ್ಚರಿಕೆ ಮೀರಿ ನಾಲ್ಕು ಮಂದಿ ಆಳಕ್ಕೆ ತೆರಳಿ ಅಲೆಗಳ ಜೊತೆಗೆ ಆಟವಾಡುತ್ತಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಲ್ಕು ಮಂದಿ ಕೊಚ್ಚಿ ಹೋಗುತ್ತಿದಾಗ ಗಮನಿಸಿದ ಜೀವರಕ್ಷಕ ದಳದವರು, ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ನಾಲ್ವರು ಬಿಜಾಪುರ ಮೂಲದವರಾಗಿದ್ದು, ಉಡುಪಿ ಪ್ರವಾಸಕ್ಕೆ ಬಂದಿದ್ದರು..