
UDUPI ; ಹಿರಿಯ ಸಾಹಿತಿ ವೈದೇಹಿ ಅವರಿಗೆ ಗೌರವ ಡಾಕ್ಟರೇಟ್
Monday, June 6, 2022
ಹಿರಿಯ ಸಾಹಿತಿ ವೈದೇಹಿ ಅವರಿಗೆ ಅವರ ಸ್ವಗೃಹದಲ್ಲಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದವರು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ೧೨ನೆಯ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅನುಪಸ್ಥಿತರಾಗಿದ್ದರು. ಹೀಗಾಗಿ ಇಂದು ವೈದೇಹಿ ಅವರಿಗೆ ಅವರ ಮನೆಯಲ್ಲೇ ಗೌರವ ಪ್ರಧಾನ ನಡೆಸಿದರು. ಇದು ನನ್ನ ಸಾಹಿತ್ಯಕ್ಕೆ ಸಂದ ಗೌರವ, ನಾನು ಈ ಮಟ್ಟಕ್ಕೆ ಬರಬೇಕಾದರೆ, ನನ್ನ ಸಮಕಾಲೀನ ಸಾಹಿತಿಗಳು, ಕುಟುಂಬ ವರ್ಗದ ಪ್ರೋತ್ಸಾಹ, ಸಹಕಾರ ಬಹಳಷ್ಟಿದೆ. ನನ್ನನ್ನು ಗುರುತಿಸಿ ಗೌರವಿಸಿದ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ನಾನು ಆಭಾರಿಯಾಗಿದ್ದೇನೆ ಅಂತ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಹಿರಿಯ ಸಾಹಿತಿ ಡಾ. ವೈದೇಹಿ ಹೇಳಿದರು..