
ಪ್ರವಾದಿ ನಿಂದನೆ: ಭಾರತಕ್ಕೆ ಮತ್ತಷ್ಟು ಸಂಕಷ್ಟ - gulf ರಾಷ್ಟ್ರಗಳು ಮತ್ತೆ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?
Tuesday, June 7, 2022
ಕುವೈಟ್: ಟಿವಿ ಚಾನೆಲ್ ನ ಡಿಬೇಟ್ ನಡುವೆ ಬಿಜೆಪಿಯ ನೂಪುರ್ ಶರ್ಮಾ ನಡೆಸಿದ ಪ್ರವಾದಿ ನಿಂದನೆ ಮತ್ತಷ್ಟು ತಾರಕಕ್ಕೇರಿದ್ದು, ಇದೀಗ ಕುವೈತ್ ತನ್ನ ದೇಶದ ಸೂಪರ್ ಮಾರ್ಕೆಟ್ ಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಬಹಿಷ್ಕಾರ ಹೇರಿದೆ.
ಬಿಜೆಪಿಯ ನೂಪುರ್ ಶರ್ಮಾ ಮತ್ತು ನವೀನ್ ಅವರ ಈ ನಿಂದನಾತ್ಮಕ ಹೇಳಿಕೆಗಳನ್ನು ಮುಸ್ಲಿಂ ರಾಷ್ಟ್ರಗಳು ತೀವ್ರವಾಗಿ ಖಂಡಿಸಿದೆ. ಇದೀಗ ಕುವೈತ್ ಸಹಿತ ಹಲವು ಮುಸ್ಲಿಂ ರಾಷ್ಟ್ರಗಳು ಭಾರತೀಯ ಉತ್ಪನ್ನಗಳಿಗೆ ನಿಷೇಧ ಹೇರಿದೆ.
ಕುವೈತ್ ಸಿಟಿಯ ಹೊರಗಿರುವ ಸೂಪರ್ ಮಾರ್ಕೆಟ್‌ನಲ್ಲಿ ಅಕ್ಕಿಯ ಚೀಲಗಳು, ಮಸಾಲೆಗಳು ಮತ್ತು ಮೆಣಸಿನಕಾಯಿಗಳ ಕಪಾಟುಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿತ್ತು. ಅರೇಬಿಕ್ ಭಾಷೆಯಲ್ಲಿ "ನಾವು ಭಾರತೀಯ ಉತ್ಪನ್ನಗಳನ್ನು ತೆಗೆದುಹಾಕಿದ್ದೇವೆ" ಎಂದು ಬರೆಯಲಾಗಿದೆ.