-->

UDUPI : ಯಶ್ಪಾಲ್ ಸುವರ್ಣ ತಲೆ ಕಡಿದರೆ 10ಲಕ್ಷ ; ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪೋಸ್ಟ್

UDUPI : ಯಶ್ಪಾಲ್ ಸುವರ್ಣ ತಲೆ ಕಡಿದರೆ 10ಲಕ್ಷ ; ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪೋಸ್ಟ್

ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಹಾಗೂ ಶ್ರೀರಾಮ ಸೇವಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ತಲೆ ಕಡಿದರೆ ತಲಾ ಹತ್ತು ಲಕ್ಷ ಹಣ ನೀಡುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಯ ಬಿಡಲಾಗಿದೆ.. ಮಾರಿಗುಡಿ ಹೆಸರಿನ ಇನ್ ಸ್ಟಾ ಪೇಜ್‌ನಲ್ಲಿ ಕೊಲೆ ಪ್ರಚೋದನೆ ಪೋಸ್ಟ್ ಮಾಡಿ, ಇಬ್ಬರ ತಲೆ ಕಡಿದರೆ ಇಪ್ಪತ್ತು ಹಣ ಲಕ್ಷ ಹಣ ನೀಡುದಾಗಿ ಬರೆದಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿ, ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ  ಹತ್ಯೆ ಮಾಡುವ ಬೆದರಿಕೆ ಪೋಸ್ಟ್ ಮಾಡಿರುವ  ಇನ್ಸ್ಟಾಗ್ರಾಮ್  ಖಾತೆಯ ದುಷ್ಕರ್ಮಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಪು ಯುವ ಮೋರ್ಚಾ ವತಿಯಿಂದ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಶ್ರೀ ಪ್ರಕಾಶ್  ಹಾಗೂ ಕಾಪು ಪೊಲೀಸ್ ಠಾಣಾ ಉಪ ನಿರೀಕ್ಷಕರಿಗೆ ದೂರು ನೀಡಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯಶ್ಪಾಲ್ ಸುವರ್ಣ, ಪೇಜ್ ಬಗ್ಗೆ ತಲೆ‌ ಕೆಡಿಸಿಕೊಳ್ಳಲ್ಲ ಆದರೆ ನನ್ನ ತಲೆಗೆ ಬೆಲೆ ಕಟ್ಟಿದವನ ಯಾರೆಂದು ಗೊತ್ತಾದರೆ ಸಂತೋಷವಾಗುತ್ತೆ. ನನ್ನ ಬೆಲೆ ಬೆದರಿಕೆ ಹಾಕಿದವನಿಗೆ ಗೊತ್ತಿಲ್ಲ ಹಾಗಾಗಿ‌ ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಅನ್ಯಮಾರ್ಗದಲ್ಲಿ ಹೋದವನಲ್ಲ ನಾನು ದುಡಿದು ತಿನ್ನುವವನು. ನಾನು ದೇಶ ರಾಷ್ಟ್ರೀಯತೆ ವಿಚಾರದಲ್ಲಿ ಹಿಂದೆ ಹಾಗೂ ಮುಂದೆ ರಾಜಿ ಮಾಡುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ. ಈ ಹಿಂದಿನಿಂದಲೂ ಟೀಕೆ, ಬೆದರಿಕೆ, ನಿಂದನೆ, ಅಪಪ್ರಚಾರ ಮೆಟ್ಟಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದೇನೆ.ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಜಾಬ್ ಮಾರಕ ಎಂದು ದೇವರಿಗೆ ಸರಿಯಾಗಿ ಹೋರಾಟ ಮಾಡಿದ್ದೇನೆ.bಹಿಜಾಬ್ ವಿಚಾರವಾಗಿ ಬೆದರಿಕೆ ಹಾಕಲಿ ಹಾಕದೆ ಇರಲಿ ರಾಜಿ ಮಾಡುವ ಪ್ರಶ್ನೆಯೇ ಇಲ್ಲ. ಇಂತಹ ಬೆದರಿಕೆಯಿಂದ ನನ್ನ ವೇಗಕ್ಕೆ ತಡೆಯಾಗುತ್ತೆ ಎನಿಸಿದ್ದರೆ ಆ ಆಲೋಚನೆ ಬದಿಗಿಡಿ. ಇಂತಹ ಬೆದರಿಕೆ ಹಿನ್ನಲೆ ಗನ್ ಮ್ಯಾನ್ ಕೇಳುವ ಪ್ರಮೇಯ ಇಲ್ಲ ಹಿಂದುತ್ವ ಪರವಾಗಿ, ಸಂಘಟನಾತ್ಮಕವಾಗಿ ಬೆಳೆದು ಬಂದವನು. ಸಾಮಾಜಿಕ ‌ಜೀವನದಲ್ಲಿ ಬಹಳಷ್ಟು ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಪೇಜ್ ಗಳಿಂದ ನಾನು ಹೆದರಿ ಮನೆಯಲ್ಲಿ ಕೂರುವವನಲ್ಲ. ಹೊರ ರಾಜ್ಯ ಹೊರದೇಶದಲ್ಲಿ ಕುಳಿತು ಈ ಪೇಜ್ ಸೃಷ್ಟಿಸಿರಬಹುದು. ಆದರೆ ನಮ್ಮ ಜಿಲ್ಲೆಯಲ್ಲಿದ್ದು ಸಂದೇಶ ರವಾನಿಸುವವರನ್ನ ಪತ್ತೆ ಹಚ್ಚುವ ಕೆಲಸ‌ ಆಗಬೇಕು. ಇಂತಹ ಪೇಜ್ ಗಳೊಂದಿಗೆ ತೊಡಗಿಸಿಕೊಂಡವರು ನಮ್ಮ ಊರಿನಲ್ಲಿದ್ದರೆ ಮಾರಕ. ಇಂತವರಿಂದ ನಮ್ಮ ಕಾರ್ಯಕರ್ತರಲ್ಲಿ ಹಾಗೂ ಅವರ ಕುಟುಂಬಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತೆ.‌ ಮನೆಯಲ್ಲೇ‌ ಮನಸ್ಥಾಪ ಸೃಷ್ಟಿಯಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಆಗಬಹುದು. ಹೀಗಾಗಿ ಮಾರಿಗುಡಿ ಪೇಜ್ ಹಿಂದೆ ಇರುವವರನ್ನ ಕಡಿವಾಣ ಹಾಕಬೇಕಿದೆ.ಜಮ್ಮು ಕಾಶ್ಮೀರದ ಉಗ್ರಗಾಮಿ ಬೆಂಗಳೂರಿನಲ್ಲಿ ಹತ್ತು ವರ್ಷದ ಹಿಂದೆ ರಿಕ್ಷಾ ಬಿಡುತ್ತಿದ್ದ.ಹೀಗೆ ಗಡ್ಡ ಬಿಟ್ಟು ಟೋಪಿ ಹಾಕಿ ನಾಟಕ ಮಾಡುವವರು ಇಂತಹ ಪೇಜ್ ಹಿಂದೆ ಇರಬಹುದು
ಹಿಂದು ಗಳಿಗೆ ಬೆದರಿಕೆ ಹಾಕಿ ಅವರ ವೇಗ ನಿಯಂತ್ರಣ ಮಾಡಿ ಅವರ ಬೇಳೆ ಬೇಯಿಸುವವರು ಇರಬಹುದು.ಉಡುಪಿ ಜಿಲ್ಲೆ ಸಂಘಟನಾತ್ನಕವಾಗಿದೆ ಯಾವ ಸಂಧರ್ಬದಲ್ಲಿ ಹೇಗೆ ಉತ್ತರ ಕೊಡಬೇಕೆಂದು ಗೊತ್ತಿದೆ ಅಂತ ತಿರುಗೇಟು ನೀಡಿದ್ದಾರೆ..

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99