UDUPI: ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು..!
Monday, June 6, 2022
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗೆ, ಕಿಡಿಗೇಡಿಗಳು ನಾಥೂರಾಮ್ ಗೋಡ್ಸೆ ಹೆಸರು ನಾಮಕರಣ ಮಾಡಿ ಫಲಕ ಅಳವಡಿಸಿದ್ದು ವಿವಾದ ಕಾರಣವಾಯ್ತು. ಬಳಿಕ ಪಂಚಾಯತ್ ಹಾಗೂ ಪೊಲೀಸರು ನಾಮಫಲಕ ತೆರವುಗೊಳಿಸಿ, ವಿವಾದವನ್ನು ಬಗೆಹರಿಸಿದರು. ಇಂದು ಬೆಳಗ್ಗೆ ಬೋಳದ ರಸ್ತೆಯೊಂದಕ್ಕೆ ಕಿಡಿಗೇಡಿಗಳು ನಾಥೂರಾಮ್ ಗೋಡ್ಸೆ ರಸ್ತೆ ಅಂತ ನಾಮಕರಣ ಮಾಡಿ ನಾಮಫಲಕ ಅಳವಡಿಸಿದರು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಾರೀ ಸುದ್ದಿಯಾಗಿತ್ತು. ನಂತರ ಸ್ಥಳಕ್ಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು, ಆದಷ್ಟು ಶೀಘ್ರವಾಗಿ ನಾಮಫಲಕ ತೆರಳಿಸದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಕೂಡಲೇ ಎಚ್ಚೆತ್ತುಕೊಂಡ ಪಂಚಾಯತ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ನಾಮಫಲಕ ತೆರವುಗೊಳಿಸಿದರು..