
UPSC ಪಾಸಾದಳೆಂದು ಯುವತಿಗೆ ಸನ್ಮಾನ : ಬಳಿಕ ಹೇಳಿದಳು ನಾನು ಪಾಸ್ ಆಗಿಲ್ಲ: ಎಡವಟ್ಟಿಗೆ ಕಾರಣ ಏನ್ ಗೊತ್ತಾ?
Sunday, June 5, 2022
ಜಾರ್ಖಂಡ್: ತನ್ನ ಮೊದಲ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆಂದು 24 ವರ್ಷದ ಯುವತಿ ಮತ್ತು ಆಕೆಯ ಮನೆಯವರನ್ನು ಇಲ್ಲಿನ ರಾಮಘಡ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಗಿತ್ತು. ಆದರೆ ಬಳಿಕ ಈ ಯುವತಿ ಜಿಲ್ಲಾಡಳಿತದ ಕ್ಷಮೆಯಾಚಿಸಿದ್ದು, ಇದು ತಪ್ಪು ಮಾಹಿತಿಯಿಂದ ನಡೆದ ಅಚಾತುರ್ಯ ಎಂದಿದ್ದಾಳೆ.
ರಾಮಘಡ ಜಿಲ್ಲೆಯ ದಿವ್ಯಾ ಪಾಂಡೆ ಎಂಬ ಯುವತಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದಳು. ಫಲಿತಾಂಶ ಬಂದಾಗ ಈಕೆ 323ನೇ ರ್ಯಾಂಕ್‌ನೊಂದಿಗೆ ಪಾಸಾಗಿದ್ದಾಳೆ ಎನ್ನಲಾಗಿತ್ತು. ಈ ನಿಟ್ಟಿನಲ್ಲಿ ಸನ್ಮಾನ ಕೂಡಾ ಮಾಡಲಾಗಿತ್ತು. ಆದರೆ ಅಸಲಿಗೆ ಪಾಸಾಗಿದ್ದು ಈಕೆಯಲ್ಲ. ಅದು ದಕ್ಷಿಣ ಭಾರತದ ದಿವ್ಯಾ ಪಿ ಎಂಬ ಯುವತಿ.
ಇಬ್ಬರ ಹೆಸರೂ ಒಂದೇ ರೀತಿ ಇದ್ದುದರಿಂದ ಈ ಅಚಾತುರ್ಯ ಸಂಭವಿಸಿದೆ, ಹೊರತು ಸುಳ್ಳು ಹೇಳಿದ್ದಲ್ಲ ಎಂದು ದಿವ್ಯಾ ಕುಟುಂಬಸ್ಥರು ಹೇಳಿದ್ದಾರೆ.