
UDUPI : ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರದಲ್ಲಿ ಮತ್ತೆ ಗೊಂದಲದ ವಾತಾವರಣ
ಉಡುಪಿ ಪಡುಬಿದ್ರಿಯಲ್ಲಿರುವ ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರದ ಕೋಡ್ದಬ್ಬು ದೇವಸ್ಥಾನದಲ್ಲಿ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಕ್ಷೇತ್ರದಲ್ಲಿ ಮೇಲ್ಚಾವಣೆ ವಿಚಾರವಾಗಿ ವಿವಾದ ನಡೆದು ಕೊನೆಗೆ ಸುಖ್ಯಾಂತ ಕಂಡಿತ್ತು. ನಿನ್ನೆ ಕ್ಷೇತ್ರದಲ್ಲಿ ಮೇಲ್ಚಾವಣಿ ನಿರ್ಮಾಣದ ವೇಳೆ ಸ್ಥಳೀಯರೊಬ್ಬರ ಕಾಂಪೌಂಡ್ ಪಕ್ಕದಲ್ಲೇ ಗುಳಿಗನ ಕಟ್ಟೆ ನಿರ್ಮಾಣ ಮಾಡಿದ್ದರು. ಇದನ್ನು ಸ್ಥಳೀಯ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದಾಗ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿಯ ತೀವ್ರತೆ ಅರಿತ ಪೊಲೀಸರು ಕ್ಷೇತ್ರದ ಕೆಲ ಭಕ್ತರಿಂದಲೇ ಗುಳಿಗನ ಕಟ್ಟೆಯನ್ನು ತೆರವುಗೊಳಿಸಿದರು.. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.