
UDUPI : ಗೋಡ್ಸೆ ನಾಮಫಲಕ ಅಳವಡಿಸಿದವರ ವಿರುದ್ಧ ಸೆಕ್ಷನ್ 153 ಎʼಯಡಿ ದಾಖಲಿಸಿ ; ವೀರಪ್ಪ ಮೊಯ್ಲಿ
ಮಹಾತ್ಮ ಗಾಂಧಿಯ ಸಿದ್ಧಾಂತವಿರುವ ಉಡುಪಿಯ ಕಾರ್ಕಳದಲ್ಲಿ ಗೋಡ್ಸೆ ಹೆಸರಿನ ನಾಮಫಲಕ ಅಳವಡಿಸಿರುವುದು ವಿಷಾದನೀಯ. ಗೋಡ್ಸೆಯಂತಹ ಮನಸ್ಥಿತಿಯುಳ್ಳ ವ್ಯಕ್ತಿಗಳಿಂದ ಇಂತಹ ಕೃತ್ಯ ನಡೆದಿದೆ. ಇದರ ಮೂಲೋತ್ಕಟನೆ ಮಾಡಬೇಕಿದೆ. ಇದು ಸೀರಿಯಸ್ ಅಫೆನ್ಸ್ ಅಂತ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದರು. ಕಾರ್ಕಳದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗೋಡ್ಸೆ ನಾಮಫಲಕ ವಿಚಾರವಾಗಿ ಪೊಲೀಸರು ಐಪಿಸಿ ಸೆಕ್ಷನ್ 290ರಡಿ (ಕ್ಲುಲ್ಲಕ ಪ್ರಕರಣ) ಕೇಸ್ ದಾಖಲಿಸಿದ್ದಾರೆ. ಇಂತಹ ಗಂಭೀರ ಪ್ರಕರಣವನ್ನು ಸೆಕ್ಷನ್ 153 ಎʼಯಡಿ ದಾಖಲಿಸಬೇಕಿತ್ತು. ಪೊಲೀಸ್‌ನವರು ಸರಿಯಾದ ರೀತಿಯಲ್ಲಿ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ. ಹೀಗಾಗಿ ಪೊಲೀಸ್ ಅಧಿಕಾರಿಗಳಿಗೆ ಇನ್ನೊಮ್ಮೆ ತರಬೇತಿ ನೀಡುವ ಅವಶ್ಯಕತೆ ಇದೆ. ಅಧಿಕಾರಿಗಳ ನಿಷ್ಠೆ ವೃತ್ತಿಗಿರಬೇಕೆ ಹೊರತು ಪಕ್ಷಕ್ಕೆ ಅಲ್ಲ ಎಂದು ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದರು.