
UDUPI: ಸನ್ಮಾನ ವೇಳೆ ನೀಡಿದ 2 ಲಕ್ಷವನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡಿದ ರವಿ ಕಟಪಾಡಿ
ಅಷ್ಟಮಿಯ ಸಂದರ್ಭ ವೇಷ ಧರಿಸಿ, ಅದರಿಂದ ಬಂದ 89 ಲಕ್ಷದ 75 ಸಾವಿರ ರೂಪಾಯಿಯನ್ನು ಅನಾರೋಗ್ಯ ಪೀಡಿತ ಬಡಮಕ್ಕಳಿಗೆ ನೀಡಿದ, ಉಡುಪಿಯ ರವಿ ಕಟಪಾಡಿ, ಈಗ
ತನಗೆ ಸನ್ಮಾನ ವೇಳೆ ನೀಡಿದ ಹಣ, ದಾನಿಗಳು ತಮ್ಮ ಅಕೌಂಟಿಗೆ ಕಳಿಸಿದ ಹಣವನ್ನು ಸೇರಿಸಿ 2 ಲಕ್ಷ ರೂಪಾಯಿಯನ್ನು ಅನಾರೋಗ್ಯ ಮಕ್ಕಳಿಗೆ ನೀಡಿ ಉದಾರತೆ ಮೆರೆದಿದ್ದಾರೆ. ನರ ಸಮಸ್ಯೆಯಿಂದ ಬಳಲುತ್ತಿರುವ ಆರು ವರ್ಷದ ಮಗು ದೃತಿಗೆ 1 ಲಕ್ಷ ರೂಪಾಯಿ, ಹಾಗೂ ಹೃದಯ ಸಂಬಂಧಿ ಕಾಯಿಲೆ ಬಳಲುತ್ತಿದ್ದು 18 ದಿನದ ಮಗುವಿನ ಚಿಕಿತ್ಸೆಗೆ ಅಂತ 1 ಲಕ್ಷ ರೂಪಾಯಿ ನೀಡಿದ್ದಾರೆ. ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬು ಸ್ವಾಮಿ ದೇವಸ್ಥಾನದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಮುಂದೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಬಡವರಿಗೆ ಸಹಾಯ ಮಾಡಬೇಕೆಂಬುದು ರವಿ ಅವರ ಕನಸು. ರವಿ ಅವರ ಸಾಧನೆ ಗುರುತಿಸಿ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಅತಿಥಿ ಸ್ವರ್ದಿಯಾಗುವ ಅವಕಾಶವೂ ಲಭಿಸಿತ್ತು..