
UDUPI : ಕತ್ತಿ ತೋರಿಸಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನ ಕಳ್ಳತನ
ಮನೆಯವರಿಗೆ ಕತ್ತಿ ತೋರಿಸಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನು ಕಳ್ಳತನ ಮಾಡಿದ ಘಟನೆ ಉಡುಪಿಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ಬಲ್ಚಾರ ಎಂಬಲ್ಲಿ ನಡೆದಿದೆ.
ಇಲ್ಲಿನ, ದಯಾಕರ್ ಹಾಗೂ ಪ್ರಸಾದ್ ಅವರು ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಕೊಟ್ಟಿಗೆ ಹತ್ತಿರದಲ್ಲಿ ಕಾರೊಂದು ನಿಂತಿರುವುದನ್ನು ಗಮನಿಸಿ ದನದ ಕೊಟ್ಟಿಗೆ ಬಂದು ನೋಡುವಾಗ ಅಪರಿಚಿತ ವ್ಯಕ್ತಿಗಳು 2 ದನಗಳನ್ನು ಎಳೆದೊಯ್ಯುತ್ತಿದ್ದರು.
ಬಿಡಿಸಿಕೊಳ್ಳಲು ಅವರ ಸಮೀಪ ಹೋದಾಗ, ನೀವು ಮುಂದೆ ಬಂದರೆ ನಿಮಗೆ ಕತ್ತಿಯಿಂದ ಕಡಿದು ಕೊಲ್ಲುವುದಾಗಿ ಕತ್ತಿಯನ್ನು ತೋರಿಸಿ ಬೆದರಿಸಿದ್ದರು. ಸುಮಾರು 30 ಸಾವಿರ ರೂ. ಮೌಲ್ಯದ ಎರಡು ದನಗಳನ್ನು ಕದ್ದು ಪರಾರಿಯಾಗಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.