-->
ads hereindex.jpg
UDUPI: ಶಟರ್‌ ಮುರಿದು ಅಂಗಡಿಗೆ ನುಗ್ಗಿದ ಕಳ್ಳರು:  ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಕಳ್ಳತನ

UDUPI: ಶಟರ್‌ ಮುರಿದು ಅಂಗಡಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಕಳ್ಳತನ

ಉಡುಪಿಯ  ಅಂಗಡಿಯೊಂದಕ್ಕೆ  ಶಟರ್‌ಗೆ ಹಾಕಿದ ಬೀಗ ಮುರಿದು ನುಗ್ಗಿದ ಖದೀಮರು, ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳನ್ನು ಕಳ್ಳತನಗೈದಿದ್ದಾರೆ. 

ಉಡುಪಿಯ ಅಂಬಲಪಾಡಿಯ ಆನಂದ ಭಟ್‌ ಅವರು ಪ್ರಶಾಂತ್‌ ಶೆಟ್ಟಿ ಅವರೊಂದಿಗೆ ಸೇರಿ ಬಲಾಯಿಪಾದೆ ಬಳಿ ಡಿಸ್ಟ್ರಿಬ್ಯೂಶನ್‌ ಅಂಗಡಿಯನ್ನು ನಡೆಸಿಕೊಂಡಿದ್ದರು. ಅದರಲ್ಲಿ ಐಟಿಸಿ ಕಂಪೆನಿಯ ಸಿಗರೇಟ್‌ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿದ್ದರು. 

ಜೂ.21ರಿಂದ 22ರ ನಡುವಿನ ಅವಧಿಯಲ್ಲಿ ಅಂಗಡಿಯ ಶಟರ್‌ ಮುರಿದು ಅಂಗಡಿ ಒಳಗೆ ಪ್ರವೇಶಿಸಿ, ಕ್ಯಾಶ್‌ ಡ್ರಾವರ್‌ನಲ್ಲಿದ್ದ 17 ಸಾವಿರ ರೂ.ನಗದು ಹಾಗೂ 5,47,744 ರೂ.ಮೌಲ್ಯದ ಐಟಿಸಿ ಕಂಪೆನಿಯ ಸಿಗರೇಟ್‌ ಪ್ಯಾಕ್‌ಗಳನ್ನು ಕಳತನ ಮಾಡಿರುತ್ತಾರೆ.  ಒಟ್ಟು ಮೌಲ್ಯ 5,64,744 ರೂಗಳ ಸೊತ್ತುಗಳ ಕಳ್ಳತನವಾಗಿರುತ್ತದೆ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2